ಏಕತೆ: ಮರೆತು ಬಿಡಬಹುದಾದ ಮಾತೆಂದು ಎಸ್ಸೆನ್
ಬೆಂಗಳೂರು, ಜುಲೈ 6– ‘ಸಂಸ್ಥಾ ಕಾಂಗ್ರೆಸ್ ಹಾಗೂ ಆಡಳಿತ ಕಾಂಗ್ರೆಸ್ ನಡುವೆ ಐಕ್ಯದ ಮಾತನ್ನು ನಾವು ಮರೆತುಬಿಡಬಹುದು’

ಐಕ್ಯಸ್ಥಾಪನೆಯ ಬಗ್ಗೆ ಪ್ರಯತ್ನ ನಡೆಯುತ್ತಿದೆಯೆಂಬ ವರದಿಯನ್ನು ಗಮನಕ್ಕೆ ತಂದಾಗ ಸಂಸ್ಥಾ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪ ಅವರು ನೀಡಿದ ಪ್ರತಿಕ್ರಿಯೆಯಿದು.

‘ಈ ಐಕ್ಯಸಾಧನೆಗಾಗಿ ನಾವಾರೂ ಪ್ರಯತ್ನ ಮಾಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಕೆಲವರನ್ನು ಅಶಿಸ್ತಿನ ಕಾರಣ ಸಂಸ್ಥೆಯಿಂದ ಹೊರಕ್ಕೆ ಕಳುಹಿಸಲಾಯಿತು. ಕೆಲವರು ಅಧಿಕಾರ ಲಾಲಸೆ ಹಾಗೂ ಲಂಚದ ಪ್ರಭಾವ ಕಾರಣ ಹೊರಗೆ ಹೋಗಿದ್ದಾರೆ. ದಾರಿ ತೋರಿದಲ್ಲಿ ಅವರು ವಾಪಸಾಗಬಹುದು. ಐಕ್ಯದ ಪ್ರಶ್ನೆಯಿಲ್ಲ. ಸಂಸ್ಥೆಯನ್ನು ಬಿಡಬೇಕೆನ್ನುವವರು ಬೇಗ ಬಿಡಲಿ. ನಾನು ಹಿಂದೊಮ್ಮೆ ಮುಂಬೈನಲ್ಲಿ ಹೇಳಿದಂತೆ ಬಿಡುವವರಿಗೆ ಎರಡು ತೆಂಗಿನ ಕಾಯಿ ಕೊಟ್ಟು ಕಳುಹಿಸುತ್ತೇನೆ’ ಎಂದರು.

ಅಸ್ವಸ್ಥ ಅ.ನ.ಕೃ.ಗೆ ರಾಜ್ಯಪಾಲರ ಕೊಡುಗೆ
ಬೆಂಗಳೂರು, ಜುಲೈ 6– ರಾಜ್ಯಪಾಲ ಶ್ರೀಧರ್ಮವೀರ ಅವರು ಇಂದು ಬೆಂಗಳೂರು ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಸಿದ್ಧ ಸಾಹಿತಿ ಶ್ರೀ ಅ.ನ. ಕೃಷ್ಣರಾಯರನ್ನು ಭೇಟಿ ಮಾಡಿ 1,000 ರೂಪಾಯಿ ಚೆಕ್ಕನ್ನು ನೀಡಿದರು.

ಶ್ರೀ ಅ.ನ.ಕೃ. ಅವರು ಕರುಳಿನ ಬೇನೆಗಾಗಿ ಕೆಲ ದಿನಗಳಿಂದ ಈ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.