ಶುಕ್ರವಾರ, ಸೆಪ್ಟೆಂಬರ್ 17, 2021
22 °C

50 ವರ್ಷಗಳ ಹಿಂದೆ: ಸೋಮವಾರ 02-08-1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೇಲಂ, ಆಗಸ್ಟ್‌ 1– ಮೈಸೂರು ರಾಜ್ಯ ಕೈಗೊಂಡಿರುವ ಹೇಮಾವತಿ ಮತ್ತಿತರ ಕಾವೇರಿ ಯೋಜನೆಗಳ ನಿರ್ಮಾಣ ಕಾರ್ಯ ನಿಲ್ಲಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುವವರೆಗೆ ಕಾವೇರಿ ಜಲವಿವಾದದ ಬಗ್ಗೆ ಯಾವುದೇ ಮಾತುಕತೆಗೂ ತಮಿಳುನಾಡು ಸರ್ಕಾರ ಒಪ್ಪಿಕೊಳ್ಳುವುದಿಲ್ಲವೆಂದು ಮುಖ್ಯಮಂತ್ರಿ ಕರುಣಾನಿಧಿಯವರು ಇಂದು ಇಲ್ಲಿ ತಿಳಿಸಿದರು.

‘ವಿವಾದವನ್ನು ಮಾತುಕತೆ ಮೂಲಕ ಇತ್ಯರ್ಥಗೊಳಿಸಲಾಗುವುದು ಎಲ್ಲ ಪ್ರಯತ್ನಗಳೂ ವಿಫಲಗೊಂಡಲ್ಲಿ ವಿವಾದವನ್ನು ಪಂಚಯಿತಿಗೊಪ್ಪಿಸಬಹುದು ಎಂದು ಪ್ರಧಾನ ಮಂತ್ರಿಯವರು ಹಾಗೂ ಕೇಂದ್ರ ನೀರಾವರಿ ಸಚಿವರು ಈ ಹಿಂದೆ ಅನೇಕ ಬಾರಿ ತಿಳಿಸಿದ್ದರು’ ಎಂದು ಕರುಣಾನಿಧಿಯವರು ಅಖಿಲ ಭಾರತ ಖಾದಿ, ಸ್ವದೇಶಿ ಮತ್ತು ಕೈಮಗ್ಗದ ಪ್ರದರ್ಶನ ಉದ್ಘಾಟಿಸುತ್ತ ನುಡಿದರು. 

ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆ ಅತೃಪ್ತಿಕರ– ಕೆಂಗಲ್‌

ಬೆಂಗಳೂರು, ಆಗಸ್ಟ್‌ 1– ಮೈಸೂರು ರಾಜ್ಯದ ಕೈಗಾರಿಕೆಗಳ ಬಂಡವಾಳ ಹೂಡಿಕೆ, ಬೆಳವಣಿಗೆಯ ಪ್ರಮಾಣದ ಬಗ್ಗೆ ಕೇಂದ್ರದ ರೈಲ್ವೆಮಂತ್ರಿ ಕೆ. ಹನುಮಂತಯ್ಯನವರು ಇಂದು ಇಲ್ಲಿ ಅತೃಪ್ತಿ ವ್ಯಕ್ತಪಡಿಸಿದರು.

ಮೈಸೂರು ರಾಜ್ಯದಲ್ಲಿ ಇತರ ರಾಜ್ಯಗಳಿಗಿಂತ ಮುಂಚೆ ಕೈಗಾರಿಕೆಗಳ ಸ್ಥಾಪನೆಯಾದರೂ ಅದರ ಮುಂದಿನ ಬೆಳವಣಿಗೆ ‘ಹುಟ್ಟುವವರಿಗೆಲ್ಲ ಹಿರಿಯ ಬೆಳೆಯುವವರಿಗೆಲ್ಲ ಕಿರಿಯ’ ಅನ್ನುವಂತಾಗಿದೆಯೆಂದು ಅಭಿಪ್ರಾಯಪಟ್ಟರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು