ಸೋಮವಾರ, ಜುಲೈ 4, 2022
21 °C

50 ವರ್ಷಗಳ ಹಿಂದೆ: ಮಂಗಳವಾರ, ಡಿಸೆಂಬರ್ 21, 1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭುಟ್ಟೊ– ಪಾಕ್ ಅಧ್ಯಕ್ಷ ಪ್ರಮಾಣವಚನ ಸ್ವೀಕಾರ
ನವದೆಹಲಿ, ಡಿ. 20–
ಜನರಲ್ ಯಾಹ್ಯಾ ಖಾನರ ನಾಯಕತ್ವದ ಮಿಲಿಟರಿ ಆಡಳಿತಕ್ಕೆ ಜನತೆಯ ವಿರೋಧ ಹೆಚ್ಚುತ್ತಿದ್ದಂತೆ, ಎಡಪಂಥೀಯ ಜನತಾ ಪಕ್ಷದ ನಾಯಕ ಜಡ್. ಎ.ಭುಟ್ಟೊ ಅವರು ಇಂದು ಪಾಕಿಸ್ತಾನದ ಅಧ್ಯಕ್ಷರಾಗಿ ನೇಮಕಗೊಂಡರು.

ವಿಶ್ವಸಂಸ್ಥೆಯಲ್ಲಿ ಅವರಿಗೆ ತುರ್ತಾಗಿ ಕರೆ ಕಳುಹಿಸಲಾಯಿತು. ವಿಶ್ವಸಂಸ್ಥೆಯಿಂದ ಹಿಂತಿರುಗಿದ ಕೂಡಲೇ ಅವರಿಗೆ ಅಧಿಕಾರವನ್ನು ವಹಿಸಿಕೊಡಲಾಯಿತು ಎಂದು ರೇಡಿಯೊ ಪಾಕಿಸ್ತಾನ್ ವರದಿ ಮಾಡಿದೆ.

ಭುಟ್ಟೋ ಅವರನ್ನು ಪಾಕಿಸ್ತಾನದ ಅಧ್ಯಕ್ಷರಾಗಿ ಹಾಗೂ ಮಿಲಿಟರಿ ಆಡಳಿತಗಾರರನ್ನಾಗಿ ನೇಮಕ ಮಾಡಲಾಗಿದೆ ಎಂದು ರೇಡಿಯೊ ತಿಳಿಸಿದೆ. ಅವರು ಔಪಚಾರಿಕವಾಗಿ ಪ್ರಮಾಣ ವಚನ ಸ್ವೀಕರಿಸಿದರು.

‘ಜೂಜು– ಮೋಜು’ ಮೇಳಕ್ಕೆ ಲೈಸೆನ್ಸ್‌ ಕಾರ್ಪೊರೇಷನ್ ಸಭೆಯಲ್ಲಿ ಬಿಸಿ ಚರ್ಚೆ
ಬೆಂಗಳೂರು, ಡಿ. 20–
ಮನರಂಜನೆ–ಪ್ರದರ್ಶನವಾದ ನಗರದ ಸುಭಾಷ್ ನಗರದ ರಾಷ್ಟ್ರೀಯ ಮೇಳಕ್ಕೆ ಲೈಸೆನ್ಸ್ ನೀಡುವ ವಿಷಯವು ನಗರ ಕಾರ್ಪೊರೇಷನ್ ಸಭೆಯಲ್ಲಿ ಕೋಪಾವೇಶಗಳನ್ನು ಹುಟ್ಟು ಹಾಕಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು