50 ವರ್ಷಗಳ ಹಿಂದೆ ಪ್ರಜಾವಾಣಿ: ಮಂಗಳವಾರ, 12–1–1971

ವಿದ್ಯಾರ್ಥಿಗಳಿಗೆ ಶುಲ್ಕ ರಿಯಾಯಿತಿ ಸಂಬಂಧ ಪೋಷಕರ ವರಮಾನದ ಮಿತಿ
ಬೆಂಗಳೂರು, ಜ. 11– ಕಾಲೇಜುಗಳು, ಪಾಲಿಟೆಕ್ನಿಕ್‌ಗಳು ಮತ್ತು ಹೈಯರ್ ಸೆಕೆಂಡರಿ 11ನೇ ತರಗತಿಗಳಲ್ಲಿ ಫ್ರೀಷಿಪ್ ನೀಡಲು ತಂದೆ ತಾಯಿಗಳ ವಾರ್ಷಿಕ ವರಮಾನದ ಮಿತಿ 2,400 ರೂ. ಇದ್ದುದ್ದನ್ನು ಸರ್ಕಾರ 3,600ಕ್ಕೆ ಹೆಚ್ಚಿಸಿದೆ.
ಕಾಲೇಜುಗಳು, ಪಾಲಿಟೆಕ್ನಿಕ್‌ಗಳು ಮತ್ತು ಹೈಯರ್ ಸೆಕೆಂಡರಿ 11ನೇ ತರಗತಿಗಳಲ್ಲಿ ನೀಡಲಾಗುವ ಒಟ್ಟು ಫ್ರೀಷಿಪ್‌ಗಳಲ್ಲಿ ಅರ್ಧದಷ್ಟನ್ನು ವಾರ್ಷಿಕ 1,800 ರೂ.ಗಿಂತ ಕಡಿಮೆ ಆದಾಯವಿರುವವರ ಮಕ್ಕಳಿಗೆ ಪೂರ್ಣ ಫ್ರೀಷಿಪ್ ಆಗಿ ನೀಡಲಾಗುವುದು.
ಒಂದು ತಿಂಗಳಲ್ಲಿ ಚಿಲ್ಲರೆ ನಾಣ್ಯದ ಅಭಾವ ಸುಧಾರಣೆ
ಬೆಂಗಳೂರು, ಜ. 11– ದೇಶದ ನಾನಾ ಕಡೆಗಳಲ್ಲಿ ಕಂಡುಬರುತ್ತಿರುವ ಚಿಲ್ಲರೆ ನಾಣ್ಯಗಳ ಅಭಾವ ಪರಿಸ್ಥಿತಿ ಇನ್ನು ಒಂದು ತಿಂಗಳಲ್ಲಿ ಕೆಲ ಮಟ್ಟಿಗೆ ಸುಧಾರಿಸುವ ಸೂಚನೆಗಳಿವೆ.
ಹಲವು ಬಗೆಯ ನಾಣ್ಯಗಳನ್ನು ಲೋಹದ ಆಸೆಗಾಗಿ ಕೆಲವರು ಕರಗಿಸಲಾರಂಭಿಸಿದ್ದೇ ನಾಣ್ಯದ ಅಭಾವಕ್ಕೆ ಕಾರಣವೆಂದು ಹೇಳಲಾಗಿದೆ. ಪರಿಸ್ಥಿತಿಯನ್ನು ಗಮನಿಸಿ ಟಂಕಸಾಲೆ ಸಾಕಷ್ಟು ನಾಣ್ಯಗಳನ್ನು ಬಿಡುಗಡೆ ಮಾಡುವ ಪ್ರಯತ್ನ ಕೈಗೊಂಡಿದೆಯೆಂದು ತಿಳಿದುಬಂದಿದೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.