ಗುರುವಾರ , ಫೆಬ್ರವರಿ 25, 2021
19 °C

ಪ್ರಜಾವಾಣಿ 50 ವರ್ಷಗಳ ಹಿಂದೆ: ಶನಿವಾರ, 16–1–1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಗರದಲ್ಲಿ ಸಾರ್ವಜನಿಕ ಬಳಕೆಯ ಗಣಕಯಂತ್ರ

ಬೆಂಗಳೂರು, ಜ. 15– ಭಾರತದಲ್ಲಿಯೇ ಪ್ರಥಮವಾದ ಸಾರ್ವಜನಿಕ ಬಳಕೆಯ ಗಣಕಯಂತ್ರವನ್ನು (ಕಂಪ್ಯೂಟರ್‌) ಬೆಂಗಳೂರಿನಲ್ಲಿ ಸ್ಥಾಪಿಸುವ ಸಂಭವವಿದೆ.

ಸರ್ಕಾರ, ವಿಶ್ವವಿದ್ಯಾಲಯ, ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಗಳು ಬಳಸಬಹುದಾದ ಗಣಕಯಂತ್ರ ಸ್ಥಾಪನೆಗೆ ಬೆಂಗಳೂರು ಸೂಕ್ತ ಪ್ರದೇಶವಾಗಿದ್ದು, ಇಲ್ಲಿ ಪರಿಣಾಮಕಾರಿಯಾಗಿ ಉಪಯೋಗಿಸಬಹುದೆಂದು ದೆಹಲಿಯ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ ಡೈರೆಕ್ಟರ್‌ ಜನರಲ್‌ ಡಾ. ಆತ್ಮಾರಾಂ ಅವರು ನಿನ್ನೆ ಇಲ್ಲಿ ತಿಳಿಸಿದರು.

‘ಕಾಶ್ಮೀರ’ ಚರ್ಚೆಯ ಪಾಕ್‌ ಯತ್ನಕ್ಕೆ ಯಶಸ್ವೀ ವಿರೋಧ

ಸಿಂಗಪುರ, ಜ. 15– ಕಾಮನ್‌ವೆಲ್ತ್‌ ಸಮ್ಮೇಳನದ ಬೆಳಗಿನ ಅಧಿವೇಶನದಲ್ಲಿ ಇಂದು ಕಾಶ್ಮೀರ ಸಮಸ್ಯೆಯನ್ನು ಚರ್ಚಿಸಲೆಳಸಿದ ಪಾಕಿಸ್ತಾನದ ವಾಣಿಜ್ಯ ಸಚಿವ ಅಹ್ಸಾನುಲ್‌ ಹಕ್‌ರ ಪ್ರಯತ್ನವನ್ನು ಭಾರತದ ವಿದೇಶಾಂಗ ಸಚಿವ ಸ್ವರಣ್‌ ಸಿಂಗ್‌ ಇಂದು ಯಶಸ್ವಿಯಾಗಿ ವಿರೋಧಿಸಿದರು.

ಅವರ ವಿರೋಧವನ್ನು ಒಪ್ಪಿಕೊಂಡ ಸಮ್ಮೇಳನದ ಅಧ್ಯಕ್ಷ ಸಿಂಗಪುರದ ಪ್ರಧಾನಿ ಲೀ ಕ್ವಾನ್‌ ಯೆನ್‌ ಅವರು, ಕಾಶ್ಮೀರವು ಅಂತರರಾಷ್ಟ್ರೀಯ ಸಮಸ್ಯೆಯೆಂದು ವಾದಿಸಲು ಹೊರಟ ಪಾಕ್‌ ಸಚಿವರಿಗೆ ಮುಂದುವರಿಯಲು ಬಿಡಲಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು