ಸೋಮವಾರ, ಜೂನ್ 14, 2021
22 °C

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಶನಿವಾರ, 22-5-1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಸ್ಪೃಶ್ಯತೆ ಅಪರಾಧಕ್ಕೆ ತೀವ್ರ ಶಿಕ್ಷೆಗೆ ಸಲಹೆ

ನವದೆಹಲಿ, ಮೇ 21– ಅಸ್ಪೃಶ್ಯತೆ ಮೊಕದ್ದಮೆಗಳಲ್ಲಿ ಶಿಕ್ಷೆ ಹೆಚ್ಚಿಸಬೇಕೆಂದು ಇಂದು ಇಲ್ಲಿ ಕೇಂದ್ರ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಚಿವ ಸಿದ್ಧಾರ್ಥ ಶಂಕರರಾಯ್‌ ಅವರ ಅಧ್ಯಕ್ಷತೆಯಲ್ಲಿ ಸೇರಿದ್ದ ರಾಜ್ಯಗಳ ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಸಚಿವರ ಸಮ್ಮೇಳನವು ಅವಿರೋಧವಾಗಿ ಸರ್ಕಾರಕ್ಕೆ ಶಿಫಾರಸು ಮಾಡಿತು.

ಎಸಗಿದ ಅಪರಾಧಗಳ ಸಂಖ್ಯೆಯನ್ನು ಆಧರಿಸಿ ಕನಿಷ್ಠ ಮೂರು ತಿಂಗಳ ಸಜಾ ಜತೆಗೆ 50 ರೂಪಾಯಿಗಳ ದಂಡದಿಂದ ಆರಂಭಿಸಿ ಪರಮಾವಧಿಯಾಗಿ ಎರಡು ವರ್ಷಗಳ ಸಜಾ ಹಾಗೂ 1,000 ರೂಪಾಯಿ ದಂಡ ವಿಧಿಸಬೇಕೆಂದು ಸಮ್ಮೇಳನವು ಸಲಹೆ ಮಾಡಿತು.

ಖಜಾನೆ ಮೂಲಕ ನಗದು ಸಂಬಳ: ಯೋಜನೆ ನ್ಯೂನತೆ

ಬೆಂಗಳೂರು, ಮೇ 21– ಖಾಸಗಿ ಶಾಲೆಗಳ ಶಿಕ್ಷಕರಿಗೆ ಚೆಕ್‌ಗಳ ಬದಲು, ಖಜಾನೆ ಮೂಲಕ ನಗದು ರೂಪದಲ್ಲಿ ಸಂಬಳ ಕೊಡಲು ಸಾಧ್ಯವೇ ಎಂಬ ರಾಜ್ಯಪಾಲರ ಸೂಚನೆಯನ್ನು ಕಳೆದ ಎರಡು ದಿನಗಳಿಂದ ಪರಿಶೀಲಿಸುತ್ತಿರುವ ಶಿಕ್ಷಣ ಇಲಾಖೆ ಅಧಿಕಾರಿಗಳು, ಈ ಸಲಹೆಯೂ ನ್ಯೂನತೆಯಿಂದ ಹೊರತಾಗಿಲ್ಲ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು