ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

50 ವರ್ಷಗಳ ಹಿಂದೆ| ಜೆ.ಪಿ. ಆಗಲಿ, ಯಾರೇ ಆಗಲಿ; ಗಲಭೆ ಎದ್ದರೆ ಸೂಕ್ತ ಕ್ರಮ: ಗಫೂರ್

Published 9 ಜುಲೈ 2024, 22:34 IST
Last Updated 9 ಜುಲೈ 2024, 22:34 IST
ಅಕ್ಷರ ಗಾತ್ರ

1,000 ಕೋಟಿ ರೂ.ಗಳ ಚಲಾವಣೆ ಸ್ತಂಭನಕ್ಕೆ ಕೇಂದ್ರದ ಆಲೋಚನೆ

ನವದೆಹಲಿ, ಜುಲೈ 9– ರಾಷ್ಟ್ರವನ್ನು ಆವರಿಸಿರುವ ಹಣದುಬ್ಬರವನ್ನು ನಿಗ್ರಹಿಸಲು ಕೇಂದ್ರ ಸರ್ಕಾರವು ಒಂದು ಸಾವಿರ ಕೋಟಿ ರೂ.ಗಳಷ್ಟು ಹಣವನ್ನು ಚಲಾವಣೆಯಿಂದ ತಡೆದಿಡಲು ನಾನಾ ಕ್ರಮಗಳನ್ನು ಕುರಿತು ಆಲೋಚಿಸುತ್ತಿರುವುದಾಗಿ ಗೊತ್ತಾಗಿದೆ.

ವೇತನಗಳನ್ನು ಆಧರಿಸಿರುವ ವರ್ಗಗಳಿಗೆ ಅನ್ವಯಿಸಿರುವ ಕಡ್ಡಾಯ ಠೇವಣಿ ಹಾಗೂ ಕಂಪನಿಗಳ ಮೇಲೆ ವಿಧಿಸಿರುವ ಡಿವಿಡೆಂಡ್ ಸ್ತಂಭನಗಳಿಂದ 500 ಕೋಟಿ ರೂ.ಗಳು ಚಲಾವಣೆಯಲ್ಲಿಲ್ಲದೆ ಕೂಡಿಕೊಳ್ಳುವು
ದೆಂದು ಅಂದಾಜು ಮಾಡಲಾಗಿದೆ. ಇನ್ನೂ 500 ಕೋಟಿ ರೂ.ಗಳನ್ನು ಇದೇ ರೀತಿ ತಡೆಹಿಡಿಯಲು ಕ್ರಮಗಳು ಸಿದ್ಧಗೊಳ್ಳುತ್ತಿವೆ.

ಜೆ.ಪಿ. ಆಗಲಿ, ಯಾರೇ ಆಗಲಿ; ಗಲಭೆ ಎದ್ದರೆ ಸೂಕ್ತ ಕ್ರಮ: ಗಫೂರ್

ಪಟನಾ, ಜುಲೈ 9– ‘ಬಿಹಾರದಲ್ಲಿ ಅರಾಜಕತೆ ಮೂಡಿಸಲು ಯತ್ನಿಸುವವರು ಜಯಪ್ರಕಾಶ ನಾರಾಯಣರೇ ಆಗಿರಲಿ, ಅವರಿಗಿಂತ ದೊಡ್ಡವರೇ ಆಗಿರಲಿಸುಮ್ಮನೆ ಬಿಡುವುದಿಲ್ಲ’ ಎಂದು ಮುಖ್ಯಮಂತ್ರಿ ಅಬ್ದುಲ್ ಗಫೂರ್ ಅವರು ಇಂದು ವಿಧಾನಸಭೆಯಲ್ಲಿ ಹೇಳಿದರು.

ಜಯಪ್ರಕಾಶ ನಾರಾಯಣರು ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಹಾಳುಗೆಡವಲು ಯತ್ನಿಸಿದರೆ ಅವರಿಗೆ ‘ಸರಿಯಾದ ಜಾಗ’ ತೋರಿಸಲಾಗುವುದು ಎಂದು ಅವರು ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT