ಜಮ್ಮು, ಜೂನ್ 18– ಜಮ್ಮುವಿನ ಮಂತ್ರವೈದ್ಯರು ಭೂತ– ಪಿಶಾಚಿಗಳ ಉಚ್ಚಾಟನಾ ಚಿಕಿತ್ಸಾಲಯವೊಂದನ್ನು ತೆರೆದಿದ್ದಾರೆ. ದೆವ್ವ ಬಿಟ್ಟು ಹೋಯಿತೆಂದು ಚಿಕಿತ್ಸಕರು ಸಾರುವವರೆಗೂ, ರೋಗಿಗಳನ್ನು ಮಣ್ಣಿನ ಮಡಕೆ ಮೇಲೆ ಕೂರಿಸಿ, ದಿನವೆಲ್ಲ ಬುಗುರಿಯಂತೆ ತಿರುಗಿಸಲಾಗುವುದು. ಈ ಚಿಕಿತ್ಸಾ ಕಾಲದಲ್ಲಿ ಚಿತ್ರಹಿಂಸೆಗೆ ಒಳಗಾಗುವವರು, ಆ ಶರೀರದಲ್ಲಿ ಅಡಗಿ ಕುಳಿತಿರುವ ದೆವ್ವವೇ ಹೊರತು ಮಾನವ ಶರೀರವಲ್ಲ ಎಂದು ಈ ಮಾಂತ್ರಿಕರ ನಂಬುಗೆ.