ಅಹಮದಾಬಾದ್, ಜುಲೈ 21– ಮ್ಹೆಸಾನ ಜಿಲ್ಲೆಯ ಕೊಳ್ವಾಡಾ ಎಂಬ ಊರಿನ ಜನರು ಆಯುಷ್ಕರ್ಮಕ್ಕೆ ಧಾನ್ಯ ಕೊಡುವುದಕ್ಕೆ ಬದಲು ಧನ ಕೊಡಲು ನಿರಾಕರಿಸಿದ್ದಕ್ಕೆ ಆ ಊರಿನ ಕ್ಷೌರಿಕರು ಒಂದು ತಿಂಗಳಿನಿಂದಲೂ ತಮ್ಮ ಉದ್ಯೋಗ ನಿಲ್ಲಿಸಿದ್ದಾರೆಂದು ವರದಿಯಾಗಿದೆ.

ಅಕ್ಕಪಕ್ಕದ ಹಳ್ಳಿಯಲ್ಲಿರುವ ಕ್ಷೌರಿಕರು ಸಹ ತಮ್ಮ ಕಸುಬುದಾರರಿಗೆ ಬೆಂಬಲವಿತ್ತು ಆ ಹಳ್ಳಿಗರಿಗೆ ಆಯುಷ್ಕರ್ಮ ಮಾಡಿಲ್ಲವಂತೆ.

ಈ ಹಟಮಾರಿತನದ ವಿರುದ್ಧ ಹಳ್ಳಿಗಾರರು ಬೇರೆ ಊರಿನಿಂದ ಕ್ಷೌರಿಕರನ್ನು ಕರೆಸುವುದಾಗಿ ಜಿಲ್ಲಾ ಮ್ಯಾಜಿಸ್ಟ್ರೇಟರಿಗೆ ತಿಳಿಸಿರುವರಂತೆ.

ಸಾಸಿವೆಯೊಡನೆ ದತ್ತೂರಿ ಬೆರೆಸಿ ಎಣ್ಣೆ ತಯಾರಿಸಿದ್ದಕ್ಕೆ ಶಿಕ್ಷೆ

ಧನ್ಬಾದ್, ಜುಲೈ 21– ಸಾಸಿವೆ ಎಣ್ಣೆ ತಯಾರಿಕೆಯಲ್ಲಿ ದತ್ತೂರಿ ಬೀಜವನ್ನು ಮಿಶ್ರ ಮಾಡಿದ್ದಾರೆಂಬ ಆಪಾದನೆಗಾಗಿ ದನ್ಬಾದಿನ ಮಹಾವೀರ್ ಎಣ್ಣೆ ಗಿರಣಿಯ ಇಬ್ಬರು ಮಾಲೀಕರಿಗೂ, ಮ್ಯಾನೇಜರಿಗೂ ಬಿಹಾರ್ ಪ್ರಾಂತದ 1947ನೇ ಸಾಲಿನ ಆಹಾರ ಮಿಶ್ರಣ ವಿರೋಧ ಕಾನೂನಿನ ರೀತ್ಯಾ ಸ್ಥಳೀಯ ಮ್ಯಾಜಿಸ್ಟ್ರೇಟರು ತಲಾ ಸಾವಿರ ರೂಪಾಯಿ ಜುಲ್ಮಾನೆ ತಪ್ಪಿದರೆ ಮೂರು ತಿಂಗಳು ಸಾದಾ ಶಿಕ್ಷೆಯನ್ನು ವಿಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.