ನವದೆಹಲಿ, ಫೆ. 9– ವಿಶ್ವದ ಬೃಹತ್ತಮ ವೈಜ್ಞಾನಿಕ ಹಾಗೂ ಅತಿ ಸುಲಭ ವೆಚ್ಚದ ಜನಗಣತಿ ಫೆಬ್ರುವರಿ 9ರಂದು ಭಾರತದಾದ್ಯಂತ ಹತ್ತಾರು ಮಹಾನಗರಗಳಲ್ಲಿ, ನೂರಾರು ನಗರಗಳಲ್ಲಿ, ಲಕ್ಷಾಂತರ ಗ್ರಾಮಗಳಲ್ಲಿ ಆರಂಭವಾಗಿ 35 ಕೋಟಿ ಜನರ ವಿವರ ಗಣತಿಯಾಗುವುದು.

ಭಾರತದ ರಾಜಧಾನಿ ದೆಹಲಿಯಲ್ಲಿ ಗಣತಿಯಾಗುವ ಪ್ರಥಮ ವ್ಯಕ್ತಿಯೆಂದರೆ ಅಧ್ಯಕ್ಷ ರಾಜೇಂದ್ರ ಪ್ರಸಾದರು.

ಇಪ್ಪತ್ತು ದಿನಗಳ ಕಾಲ ನಡೆಯುವ ಈ ಜನಗಣತಿಗೆ 1951ರ ಮಾರ್ಚ್ ತಿಂಗಳ 1ನೇ ತಾರೀಖಿನ ಸೂರ್ಯೋದಯದ ಕಾಲದಲ್ಲಿನ ಅಂಕಿ ಅಂಶಗಳನ್ನೇ ಪ್ರಾಸ್ತಾವಿಕ ಅಂಶಗಳೆಂದು ಗಣಿಸಲಾಗುವುದು. ಈ ವಿಶಾಲ ಭೂಭಾಗದಲ್ಲಿನ ಪ್ರತಿ ವ್ಯಕ್ತಿಗೆ ಸಂಬಂಧಪಟ್ಟ ಇಪ್ಪತ್ತೆರಡು ಅಂಶಗಳನ್ನು ಸಂಗ್ರಹಿಸಲು ಆರು ಲಕ್ಷ ಗಣನೆದಾರರು ಆರಂಭಿಸುವರು.

ಮೈಸೂರು ಮುಂತಾದ 12 ಸಂಸ್ಥಾನಗಳಲ್ಲಿ ನಿರುದ್ಯೋಗದ ಅಂಕಿಅಂಶಗಳನ್ನು ಸಂಗ್ರಹಿಸಲಾಗುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.