ಅನ್ನ ಸಮಸ್ಯೆ; ಧಾನ್ಯ ಉಳಿಕೆ ಕುರಿತು ಮುನ್ಷಿ

ಮುಂಬೈ, ಜುಲೈ 23– ಆಹಾರ ಧಾನ್ಯ ಶೇಖರಣೆಗೆಂದು ಹೆಚ್ಚುವರಿ ಸಂಸ್ಥಾನಗಳು ಯಾವ ಪ್ರಯತ್ನವನ್ನೂ ಮಾಡಿಲ್ಲವೆಂದು ಭಾರತ ಸರ್ಕಾರದ ಆಹಾರ ಶಾಖೆ ಸಚಿವ ಕೆ.ಎಂ. ಮುನ್ಷಿ ಅವರು ಇಂದು ದೂರಿದರು.

ಮದರಾಸ್, ಮುಂಬಯಿ, ಪಶ್ಚಿಮ ಬಂಗಾಳ ಮತ್ತು ಹೈದರಾಬಾದ್ ಸಂಸ್ಥಾನಗಳು ಆಹಾರ ಸಂಗ್ರಹಣೆ ಮಾಡುತ್ತಿದ್ದರೂ ಉತ್ತರ ಪ್ರದೇಶ, ಮಧ್ಯಪ್ರದೇಶ, ಪೂರ್ವ ಪಂಜಾಬ್ ಮತ್ತು ಪೆಪ್ಸು ಯೂನಿಯನ್ಗಳಂಥ ಹೆಚ್ಚುವರಿ ಪ್ರದೇಶಗಳು ಸುಮ್ಮನೆ ಬರಿಯ ಹೆಸರಿಗೆ ಮಾತ್ರ ಶೇಖರಣಾ ಕಾರ್ಯ ನಡೆಸುತ್ತಿವೆ ಎಂದು ನುಡಿದರು.

ರೇಷನ್ ಪದಾರ್ಥಗಳ ಬೆಲೆ ಹೆಚ್ಚಿಸುವ ಸರ್ಕಾರದ ಸನ್ನಾಹಕ್ಕೆ ಸೋಷಲಿಸ್ಟರ ತೀವ್ರ ಖಂಡನೆ

ಬೆಂಗಳೂರು, ಜುಲೈ 23– ಸೋಷಲಿಸ್ಟ್ ಪಾರ್ಟಿಯ ನಗರ ಶಾಖೆಯ ಸರ್ವ ಸದಸ್ಯರ ಸಭೆ ಇಂದು ಮಧ್ಯಾಹ್ನ ಆರ್ಯ ವಿದ್ಯಾಶಾಲೆಯಲ್ಲಿ ನಡೆದು, ರೇಷನ್ ಪದಾರ್ಥಗಳ ಬೆಲೆ ಹೆಚ್ಚು ಮಾಡುವ ಸರ್ಕಾರದ ನಿರೀಕ್ಷಿತ ಸನ್ನಾಹವನ್ನು ತೀವ್ರವಾಗಿ ಖಂಡಿಸಿ ನಿರ್ಣಯ ಅಂಗೀಕರಿಸಿತು.

ಮೈಸೂರು ಸೋಷಲಿಸ್ಟ್ ಪಾರ್ಟಿ ಅಧ್ಯಕ್ಷ ಸಿ.ಜಿ.ಕೆ. ರೆಡ್ಡಿ ಅಧ್ಯಕ್ಷತೆವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.