ಹೈದರಾಬಾದ್, ಫೆ. 4– ಹೈದರಾಬಾದಿನ ತೆಲಂಗಾಣ ಪ್ರದೇಶದಲ್ಲಿ ನಡೆಯುತ್ತಿರುವ ವಿಧ್ವಂಸಕ ಕೃತ್ಯಗಳನ್ನು ಕೊನೆಗಾಣಿಸಿ, ಎರಡು ತಿಂಗಳ ಕಾಲವಾದರೂ ಹಿಂಸಾ ಕೃತ್ಯ ತ್ಯಜಿಸಿರುವುದನ್ನು ಕಾರ್ಯತಃ ಪ್ರದರ್ಶಿಸಿದರೆ, ಹೈದರಾಬಾದ್ ಕಮ್ಯುನಿಷ್ಟರ ಮೇಲಿರುವ ಪ್ರತಿಬಂಧವನ್ನು ತೆಗೆಯಲು ಕೇಂದ್ರ ಸರ್ಕಾರವು ಆಲೋಚಿಸುವುದೆಂದು, ಸಂಸ್ಥಾನ ಶಾಖಾ ಮಂತ್ರಿಗಳಾದ ಎನ್. ಗೋಪಾಲಸ್ವಾಮಿ ಅಯ್ಯಂಗಾರ್ಯರು ಇಂದು ಪತ್ರಿಕಾ ಸಮ್ಮೇಳನದಲ್ಲಿ ತಿಳಿಸಿದರು.

ಜನತೆಯ ಜೀವನವನ್ನು ಉತ್ತಮಗೊಳಿಸಲು ಯಾವ ರಾಜಕೀಯ ತತ್ವವನ್ನೂ ಶಾಂತಿಯುತವಾಗಿ ಪ್ರಸಾರ ಮಾಡಲು ಸರ್ಕಾರದ ಅಭ್ಯಂತರವಿಲ್ಲ ಎಂದರು. ಆದರೆ, ಅವರ ಧ್ಯೇಯೋದ್ದೇಶ ಸಾಧನೆಗೆಂದು ಹಿಂಸಾ ಮಾರ್ಗವನ್ನು ಅವಲಂಬಿಸಿದರೆ ಮಾತ್ರ ಸರ್ಕಾರದೊಡನೆ ಘರ್ಷಣೆ ಆರಂಭವಾಗುವುದೆಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.