ಸೋಮವಾರ, ನವೆಂಬರ್ 30, 2020
21 °C

ಪ್ರಜಾವಾಣಿ 25 ವರ್ಷಗಳ ಹಿಂದೆ: ಬುಧವಾರ, 15–11–1995

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

25 ವರ್ಷಗಳ ಹಿಂದೆ

ಬಹುರಾಷ್ಟ್ರೀಯ ಸಂಸ್ಥೆಗೆ ಭೂಮಿ: ರಾಜ್ಯದ ಕ್ರಮಕ್ಕೆ ಕೋರ್ಟ್‌ ಅಸ್ತು

ನವದೆಹಲಿ, ನ.14: ಭೂ ಸ್ವಾಧೀನ ಕಾಯ್ದೆ ಅನ್ವಯ ಬೆಂಗಳೂರು ಸಮೀಪದ ವೈಟ್‌ಫೀಲ್ಡ್‌ ಬಳಿ ಉನ್ನತ ತಂತ್ರಜ್ಞಾನ  ಮಾಹಿತಿ ಸಮುಚ್ಚಯಕ್ಕಾಗಿ ಕರ್ನಾಟಕ ಸರ್ಕಾರವು ತುರ್ತು ಅಧಿಕಾರ ಬಳಸಿ ಭೂಮಿ ವಶಪಡಿಸಿಕೊಂಡ ಕ್ರಮವನ್ನು ಸುಪ್ರೀಂ ಕೋರ್ಟ್‌ ಇಂದು ಎತ್ತಿ ಹಿಡಿಯಿತು.

ಸಿಂಗಾಪುರದ ಬಹುರಾಷ್ಟ್ರೀಯ ಕಂಪನಿಯು ಟಾಟಾ ಉದ್ಯಮ ಸಂಸ್ಥೆ ಮತ್ತು ಕರ್ನಾಟಕ ಕೈಗಾರಿಕೆ ಅಭಿವೃದ್ಧಿ ಮಂಡಲಿಯ ಸಹಯೋಗದಲ್ಲಿ ಉನ್ನತ ತಂತ್ರಜ್ಞಾನ ಮಾಹಿತಿ ಸಮುಚ್ಚಯವನ್ನು (ಟೆಕ್ನಾಲಜಿ ಪಾರ್ಕ್‌) ನಿರ್ಮಿಸಲು ಉದ್ದೇಶಿಸಿದ್ದು ಅದಕ್ಕಾಗಿ ಭೂ ಸ್ವಾಧೀನ ಕಾಯ್ದೆ ತುರ್ತು ವಿಧಿಗಳ ಅನ್ವಯ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು