ಸೋಮವಾರ, ಜನವರಿ 25, 2021
19 °C

ಪ್ರಜಾವಾಣಿ 25 ವರ್ಷಗಳ ಹಿಂದೆ: ಗುರುವಾರ, 4–1–1996

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಷರತ್ತಿನ ಮೇಲೆ ತಮಿಳುನಾಡಿಗೆ ನೀರು

ಬೆಂಗಳೂರು, ಜ. 3– ಎರಡು ದಿನಗಳ ಸುದೀರ್ಘ ವಿಭಿನ್ನ ರೀತಿಯ ಕಾವೇರಿದ ವಾದ ವಿವಾದ ಹಾಗೂ ವಿಚಾರ ಮಂಥನದ ನಂತರ ಪ್ರಧಾನಿ ಸೂಚನೆಗೆ ಅನುಗುಣವಾಗಿ ತಮಿಳುನಾಡಿಗೆ 6 ಟಿಎಂಸಿ ಅಡಿ ನೀರು ಬಿಡಲು ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ ಅವರ ನೇತೃತ್ವದಲ್ಲಿ ಸೇರಿದ್ದ ಸರ್ವಪಕ್ಷಗಳ ಸಭೆ ಇಂದು ಇಲ್ಲಿ ತೀರ್ಮಾನಿಸಿತು.

ಕೇಂದ್ರ ಸರ್ಕಾರ ರಾಷ್ಟ್ರೀಯ ಜಲ ನೀತಿಗೆ ಮಾರ್ಗಸೂಚಿ ಪ್ರಕಟಿಸುವವರೆಗೆ ಕಾವೇರಿ ಜಲ ವಿವಾದ ನ್ಯಾಯಮಂಡಲಿ ಮುಂದೆ ಭಾಗವಹಿಸದಿರಲು ಸಭೆ ನಿರ್ಧರಿಸಿತು.

ಜೆ.ಎಚ್‌.ಪಟೇಲ್‌ ಆಯ್ಕೆ ರದ್ದು

ಬೆಂಗಳೂರು, ಜ. 3– ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸಿದ್ದ ಅಭ್ಯರ್ಥಿಯೊಬ್ಬರ ನಾಮಪತ್ರವನ್ನು ನಿರಾಕರಿಸಿದುದು ತಪ್ಪು ಎಂಬ ಕಾರಣದ ಮೇಲೆ ಶಿವಮೊಗ್ಗ ಜಿಲ್ಲೆ ಚನ್ನಗಿರಿ ಕ್ಷೇತ್ರದ ಚುನಾವಣೆಯನ್ನು ಹೈಕೋರ್ಟ್‌ ಇಂದು ರದ್ದುಗೊಳಿಸಿತು.

ಇದರಿಂದಾಗಿ ಆ ಕ್ಷೇತ್ರದಿಂದ ಗೆದ್ದಿದ್ದ ಉಪಮುಖ್ಯಮಂತ್ರಿ ಜೆ.ಎಚ್‌.ಪಟೇಲ್‌ ಅವರ ಆಯ್ಕೆ ರದ್ದಾಗಿದೆ.

ಹೈಕೋರ್ಟ್‌ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಅವಕಾಶವಾಗುವಂತೆ ತೀರ್ಪಿನ ಜಾರಿಗೆ ನಾಲ್ಕು ವಾರಗಳ ಅವಧಿಗೆ ತಡೆ ನೀಡಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು