ಶುಕ್ರವಾರ, ಡಿಸೆಂಬರ್ 4, 2020
22 °C

ಪ್ರಜಾವಾಣಿ 50 ವರ್ಷಗಳ ಹಿಂದೆ: ಗುರುವಾರ, 12–11–1970

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

50 ವರ್ಷಗಳ ಹಿಂದೆ

ದೆಹಲಿಯಲ್ಲಿ ನಾಯಕರ ಮನವೊಲಿಸಲು ಮುಖ್ಯಮಂತ್ರಿ ಯತ್ನ

ಬೆಂಗಳೂರು, ನ. 11– ಮೂರು ದಿನಗಳ ಕಾಲ ದೆಹಲಿಯಲ್ಲಿರುವ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್‌ ಅವರು, ಇತರ ರಾಜಕೀಯ ಪಕ್ಷಗಳ ನಾಯಕರನ್ನು ಭೇಟಿ ಮಾಡಿ, ಮಹಾಜನ್‌ ವರದಿಯನ್ನು ಸಂಸತ್ತಿನ ಸಮಿತಿಯೊಂದಕ್ಕೆ ಕಳುಹಿಸಬೇಕೆಂಬ ಸಲಹೆಯನ್ನು ಒಪ್ಪಿಕೊಳ್ಳಬಾರದೆಂದು ಮನವಿ ಮಾಡಲಿದ್ದಾರೆ.

ಬೆಳಿಗ್ಗೆ ಪ್ರವಾಸದಿಂದ ಹಿಂದಿರುಗಿದ ಮುಖ್ಯಮಂತ್ರಿಯವರು, ಮಧ್ಯಾಹ್ನ ದೆಹಲಿಗೆ ಪ್ರಯಾಣ ಮಾಡಿದರು. ಶ್ರೀಯುತರು ನಾಳೆ ಪ್ರಧಾನಿ ಅವರನ್ನು ಭೇಟಿ ಮಾಡುವ ಸಂಭವವಿದೆ. ಕಾವೇರಿ ಯೋಜನೆಗಳಿಗೆ ಕೇಂದ್ರದ ಮಂಜೂರಾತಿಗಾಗಿ ಮುಖ್ಯಮಂತ್ರಿ ಒತ್ತಾಯ ಮಾಡಲಿದ್ದಾರೆ. ಸಂದರ್ಭ ಒದಗಿಬಂದಲ್ಲಿ ಗಡಿ ಸಮಸ್ಯೆಯ ಬಗ್ಗೆ ತಮ್ಮ ನಿಲುವನ್ನು ಮತ್ತೊಮ್ಮೆ ಪ್ರತಿಪಾದಿಸಲಿದ್ದಾರೆ.

‘ಶಾಸ್ತ್ರಿ ನಿಧನದ ಬಗ್ಗೆ ತನಿಖೆ ಇಲ್ಲ’

ನವದೆಹಲಿ, ನ. 11– ತಷ್ಕೆಂಟ್‌ನಲ್ಲಿ 1966ರ ಜನವರಿ 11ರಂದು ಪ್ರಧಾನಿ ಲಾಲ್‌ಬಹದ್ದೂರ್‌ ಶಾಸ್ತ್ರಿ ಅವರು ಸತ್ತ ಸಂದರ್ಭದ ಬಗ್ಗೆ ತನಿಖೆ ನಡೆಸುವುದಕ್ಕೆ ಕೇಂದ್ರಕ್ಕೆ ಯಾವ ಸಮರ್ಥನೆಯೂ ಕಾಣದು ಎಂದು ಕೇಂದ್ರ ಗೃಹ ಖಾತೆಯಲ್ಲಿ ಸ್ಟೇಟ್ ಸಚಿವರಾಗಿರುವ ಶ್ರೀ ಕೆ.ಸಿ.ಪಂತ್‌ ಅವರು ಇಂದು ಲೋಕಸಭೆಯಲ್ಲಿ ಶ್ರೀ ರಾಮಚರಣ್‌ ಅವರಿಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು