ಶನಿವಾರ, ಅಕ್ಟೋಬರ್ 8, 2022
23 °C

25 ವರ್ಷಗಳ ಹಿಂದೆ| ಕಾವೇರಿ ಸಮನ್ವಯ ಸಮಿತಿ ರಚನೆ ಸಲಹೆಗೆ ಕರುಣಾನಿಧಿ ತಿರಸ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾವೇರಿ ಸಮನ್ವಯ ಸಮಿತಿ ರಚನೆ ಸಲಹೆಗೆ ಕರುಣಾನಿಧಿ ತಿರಸ್ಕಾರ

ಚೆನ್ನೈ, ಸೆ. 4 (ಯುಎನ್‌ಐ)– ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಕಾವೇರಿ ನದಿ ಪ್ರಾಧಿಕಾರಕ್ಕೆ ಬದಲಾಗಿ ಸಮನ್ವಯ ಸಮಿತಿ ರಚಿಸಬೇಕೆಂಬ ಕರ್ನಾಟಕದ ಸಲಹೆ ಯನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ತಿರಸ್ಕರಿಸಿದ್ದಾರೆ.

ಕಾವೇರಿ ಜಲ ವಿವಾದವನ್ನು ನ್ಯಾಯಮಂಡಳಿಯಲ್ಲಿಯೇ ಇತ್ಯರ್ಥಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಒತ್ತಾಯಿಸುವುದಾಗಿ ಅವರು ಪತ್ರಕರ್ತರಿಗೆ ತಿಳಿಸಿದರು. ಪಟೇಲ್‌ ಉತ್ತರಕ್ಕೆ ಅತೃಪ್ತಿ:
ಕಾಂಗ್ರೆಸ್‌, ಬಿಜೆಪಿ ಸಭಾತ್ಯಾಗ

ಬೆಂಗಳೂರು, ಸೆ. 4– ನೀರಾವರಿ, ಅಬಕಾರಿ, ಗಣಿ, ಕ್ರೀಡೆ, ಶಿಕ್ಷಣ, ವಿದ್ಯುತ್‌ ಸೇರಿದಂತೆ ವಿವಿಧ ಇಲಾಖೆಗಳ ಬೇಡಿಕೆಗಳ ಮೇಲಿನ ಚರ್ಚೆಯ ನಂತರ ಮುಖ್ಯಮಂತ್ರಿ ಜೆ.ಎಚ್‌.ಪಟೇಲ್‌ ಅವರು ಸಮರ್ಪಕ ಉತ್ತರ ನೀಡಲಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಇಂದು ಸಭಾತ್ಯಾಗ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು