ಸೋಮವಾರ, ಆಗಸ್ಟ್ 8, 2022
23 °C

ಪ್ರಜಾವಾಣಿ 25 ವರ್ಷಗಳ ಹಿಂದೆ| ಗುರುವಾರ, ಜೂನ್‌ 26, 1997

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಂದ್ರದಲ್ಲಿ ಮತ್ತೆ ರೈತರ ಸರ್ಕಾರ: ಗೌಡರ ಪಣ

ಕೃಷ್ಣರಾಜ ಸಾಗರ (ಮಂಡ್ಯ ಜಿಲ್ಲೆ) ಜೂನ್‌ 25 – ‘ಕೇಂದ್ರದಲ್ಲಿ ರೈತರ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲು ಪಣ ತೊಟ್ಟು ಕೆಲಸ ಮಾಡುವೆ. ಇದಕ್ಕಾಗಿ ಇದೇ ಜುಲೈನಿಂದ ದೇಶದಾದ್ಯಂತ ಪ್ರವಾಸ ಮಾಡುವೆ’ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಬುಧವಾರ ಇಲ್ಲಿ ತಿಳಿಸಿದರು.‌

ನವೀಕರಣಗೊಂಡಿರುವ ವಿಶ್ವೇಶ್ವೆರಯ್ಯ ನಾಲೆಗೆ ಕೃಷ್ಣರಾಜಸಾಗರದಿಂದ ನೀರು ಹರಿಸಿದ ಬಳಿಕ ಸಾರ್ವಜನಿಕ ಸಭೆಯುನ್ನುದ್ದೇಶಿಸಿ ಅವರು ಮಾತನಾಡಿದರು.

‘ಅಧಿಕಾರ ಹೋಯಿತು ಎಂದು ಸುಮ್ಮನೆ ಕೂರುವವ ನಾನಲ್ಲ. ಮತ್ತೆ ಧೂಳಿನಿಂದೆದ್ದು ಬರುವೆ ಎಂದು ಸಂಸತ್ತಿನಲ್ಲಿ ಹೇಳಿದ್ದೆ. ಯಾವ ಪ್ರೇರಣೆಯಿಂದ ಎಂಬುದು ಗೊತ್ತಿಲ್ಲ. ಅಂದು ಈ ಮಾತು ತಾನಾಗಿ ಬಂದಿತ್ತು. ಇದೆಲ್ಲ ಏನೇ ಇರಲಿ. ಕೇಂದ್ರದಲ್ಲಿ ಮತ್ತೆ ರೈತರ ಸರ್ಕಾರ ತರುವುದು ಅಗತ್ಯವಿದೆ’ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು