ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ | ಶುಕ್ರವಾರ 03.01.1997

Last Updated 2 ಜನವರಿ 2022, 19:30 IST
ಅಕ್ಷರ ಗಾತ್ರ

‘ವಿಮಾನ ಸಂಚಾರ ವೇಳೆ ಕಾಡುವ ಯಲಹಂಕ ನೆನಪು’

ಬೆಂಗಳೂರು, ಜ. 2– ‘ಬದುಕೆಂದರೆ ಹಲವು ಅಚ್ಚರಿಗಳು ಮತ್ತು ಕುತೂಹಲಗಳ ಸಂಗಮ. ನಾನು ವಾಯುಪಡೆ ಸೇವೆಯಲ್ಲಿ ಯಶಸ್ವಿಯಾಗಿಯೇ ಇದ್ದರೆ ಇಂದು ನನ್ನ ಬದುಕೇ ಬೇರೆಯಾಗುತ್ತಿತ್ತು. ವಿಮಾನದಲ್ಲಿ ಸಂಚರಿಸುವಾಗ ಸದಾ ಯಲಹಂಕ ನನ್ನ ನೆನಪಿಗೆ ಬರುತ್ತದೆ’.

ಇಲ್ಲಿಗೆ 20 ಕಿ.ಮಿ ದೂರದಲ್ಲಿ ಇರುವ ಯಲಹಂಕ ವಾಯುಪಡೆ ಕೇಂದ್ರವನ್ನು ಇಸ್ರೇಲ್ ಅಧ್ಯಕ್ಷ ಇಜರ್ ವೈಜಮನ್ ಅವರು ನೆನಪಿಸಿಕೊಂಡದ್ದು ಹೀಗೆ. ಅವರು ಪತ್ನಿ ಜತೆ ಈ ಕೇಂದ್ರಕ್ಕೆ ಇಂದು ಭೇಟಿ ನೀಡಿದರು.

ವೈಜಮನ್ ಅವರು ಎರಡನೇ ಮಹಾಯುದ್ಧದ ಸಮಯದಲ್ಲಿ ಯಲಹಂಕದ ವಾಯುಪಡೆ ಕೇಂದ್ರದಲ್ಲಿ ಸುಮಾರು 6 ತಿಂಗಳು ಇದ್ದರು. ಇಲ್ಲಿ ವಾಯುಯಾನ ತರಬೇತಿ ಪಡೆದಿದ್ದರು. ಇಂದಿನ ಸುಮಾರು 90 ನಿಮಿಷಗಳಭೇಟಿ ಅವರಿಗೆ ಹಳೆಯ ನೆನಪುಗಳನ್ನು ಕೆದಕಿತು. ವಾಯುಪಡೆಯ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡುತ್ತ ಅಂದಿನ ದಿನಗಳು, ತಮ್ಮ ಅನುಭವಗಳನ್ನು ಹಂಚಿಕೊಂಡರು.

‘ನನ್ನ ಪತ್ನಿ 47 ವರ್ಷಗಳಿಂದ ಯಲಹಂಕ, ಬೆಂಗಳೂರು, ವಾಯುಪಡೆಯ ಜೀವನದ ನನ್ನ ನೆನಪುಗಳನ್ನು ಕೇಳಿಸಿ
ಕೊಳ್ಳುತ್ತಿದ್ದಳು’ ಎಂದು ಎದುರಿಗೆ ಕುಳಿತಿದ್ದ ಪತ್ನಿ ರೋಮಾ ಅವರತ್ತ ತಿರುಗಿ ‘ಅದೆಲ್ಲ ಇಲ್ಲಿದೆ ನೋಡು’ ಎಂದು ಹೇಳಿದಾಗ ಇಡೀ ಸಭಾಂಗಣದಲ್ಲಿ ನಗೆಯ ಅಲೆ ಎದ್ದಿತು.

ತಾವು ತರಬೇತಿ ಪಡೆಯುತ್ತಿದ್ದಾಗಿನ ರಸಮಯ ಘಟನೆಗಳು, ಒಂದು ವಿಮಾನದ ರೆಕ್ಕೆಗೆ ಹಾನಿ ಮಾಡಿದ್ದೂ ಸೇರಿದಂತೆ ಆಗಿನ ಪ್ರಮಾದಗಳನ್ನು ಇಸ್ರೇಲ್ ಅಧ್ಯಕ್ಷ ಇಜರ್ ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT