ನಗರದ ಕಾಲೇಜುಗಳು ಅನಿರ್ದಿಷ್ಟ ಕಾಲ ಬಂದ್

ಬೆಂಗಳೂರು, ಸೆ. 14– ಬೆಂಗಳೂರು ವಿಶ್ವ ವಿದ್ಯಾಲಯಕ್ಕೆ ಸೇರಿರುವ ನಗರದಲ್ಲಿನ ಕಾಲೇಜುಗಳನ್ನು ಅನಿರ್ದಿಷ್ಟಕಾಲದವರೆವಿಗೆ ಮುಚ್ಚಬೇಕೆಂದು ಇಂದು ಸಂಜೆ ನಡೆದ ಕಾಲೇಜು ಪ್ರಿನ್ಸಿಪಲ್‌ಗಳ ಸಭೆ ತೀರ್ಮಾನಿಸಿತು.

ಕೆಲವು ಶಕ್ತಿಗಳು ಬಿಕ್ಕಟ್ಟನ್ನು ಸೃಷ್ಟಿಸಿರು ವುದರಿಂದ ತಮ್ಮ ಸಂಸ್ಥೆಗಳಲ್ಲಿ ಕೆಲಸ ಕಾರ್ಯ ಗಳನ್ನು ನಿರ್ವಹಿಸಲು ಸಾಧ್ಯವಾಗು ತ್ತಿಲ್ಲ ಎಂಬುದು ಪ್ರಿನ್ಸಿಪಲ್‌ಗಳ ಒಮ್ಮತದ ಅಭಿಪ್ರಾಯವಾಗಿತ್ತು.

ವಿದ್ಯಾರ್ಥಿಗಳ ಮುಷ್ಕರದಿಂದ ಕಳೆದ ಎರಡುಮೂರು ದಿವಸಗಳ ಗಲಭೆಯಿಂದ ಉದ್ಭವಿಸಿರುವ ಪರಿಸ್ಥಿತಿಯನ್ನು ಪರಿಶೀಲಿಸಲು ಉಪ ಕುಲಪತಿ ಶ್ರೀ ಟಿ.ಕೆ. ತುಕೋಳ್ ಅವರು ಪ್ರಿನ್ಸಿಪಲ್‌ಗಳ ಸಭೆಯನ್ನು ಕರೆದಿದ್ದರು.

ಹುಬ್ಬಳ್ಳಿ–ಕಾರವಾರ ನಡುವೆ ಹೊಸ ರೈಲು ಮಾರ್ಗ: ಮಳೆಗಾಲದ ನಂತರ ಸಮೀಕ್ಷೆ

ಹೈದರಾಬಾದ್, ಸೆ. 14– ಹುಬ್ಬಳ್ಳಿಯಿಂದ ಕಾರವಾರದವರೆಗೆ ಹೊಸ ಮಾರ್ಗ ನಿರ್ಮಿಸುವ ಬಗ್ಗೆ ಮಳೆಗಾಲ ಮುಗಿದ ಕೂಡಲೇ ಎಂಜಿನಿಯರಿಂಗ್ ಮತ್ತು ಸಂಚಾರಕ್ಕೆ ಸಂಬಂಧಿಸಿದ ಪೂರ್ವಭಾವಿ ಸಮೀಕ್ಷೆ ಕಾರ್ಯ ಆರಂಭಿಸಲಾಗುವುದೆಂದು ದಕ್ಷಿಣ ಮಧ್ಯೆ ರೈಲ್ವೆಯ ಜನರಲ್ ಮ್ಯಾನೇಜರ್ ಎಂ.ಟಿ. ಲೀ ಅವರು ಇಂದು ಇಲ್ಲಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.