ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ| ಬುಧವಾರ 15-9-1971

Last Updated 14 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ನಗರದ ಕಾಲೇಜುಗಳು ಅನಿರ್ದಿಷ್ಟ ಕಾಲ ಬಂದ್

ಬೆಂಗಳೂರು, ಸೆ. 14– ಬೆಂಗಳೂರು ವಿಶ್ವ ವಿದ್ಯಾಲಯಕ್ಕೆ ಸೇರಿರುವ ನಗರದಲ್ಲಿನ ಕಾಲೇಜುಗಳನ್ನು ಅನಿರ್ದಿಷ್ಟಕಾಲದವರೆವಿಗೆ ಮುಚ್ಚಬೇಕೆಂದು ಇಂದು ಸಂಜೆ ನಡೆದ ಕಾಲೇಜು ಪ್ರಿನ್ಸಿಪಲ್‌ಗಳ ಸಭೆ ತೀರ್ಮಾನಿಸಿತು.

ಕೆಲವು ಶಕ್ತಿಗಳು ಬಿಕ್ಕಟ್ಟನ್ನು ಸೃಷ್ಟಿಸಿರು ವುದರಿಂದ ತಮ್ಮ ಸಂಸ್ಥೆಗಳಲ್ಲಿ ಕೆಲಸ ಕಾರ್ಯ ಗಳನ್ನು ನಿರ್ವಹಿಸಲು ಸಾಧ್ಯವಾಗು ತ್ತಿಲ್ಲ ಎಂಬುದು ಪ್ರಿನ್ಸಿಪಲ್‌ಗಳ ಒಮ್ಮತದ ಅಭಿಪ್ರಾಯವಾಗಿತ್ತು.

ವಿದ್ಯಾರ್ಥಿಗಳ ಮುಷ್ಕರದಿಂದ ಕಳೆದ ಎರಡುಮೂರು ದಿವಸಗಳ ಗಲಭೆಯಿಂದ ಉದ್ಭವಿಸಿರುವ ಪರಿಸ್ಥಿತಿಯನ್ನು ಪರಿಶೀಲಿಸಲು ಉಪ ಕುಲಪತಿ ಶ್ರೀ ಟಿ.ಕೆ. ತುಕೋಳ್ ಅವರು ಪ್ರಿನ್ಸಿಪಲ್‌ಗಳ ಸಭೆಯನ್ನು ಕರೆದಿದ್ದರು.

ಹುಬ್ಬಳ್ಳಿ–ಕಾರವಾರ ನಡುವೆ ಹೊಸ ರೈಲು ಮಾರ್ಗ: ಮಳೆಗಾಲದ ನಂತರ ಸಮೀಕ್ಷೆ

ಹೈದರಾಬಾದ್, ಸೆ. 14– ಹುಬ್ಬಳ್ಳಿಯಿಂದ ಕಾರವಾರದವರೆಗೆ ಹೊಸ ಮಾರ್ಗ ನಿರ್ಮಿಸುವ ಬಗ್ಗೆ ಮಳೆಗಾಲ ಮುಗಿದ ಕೂಡಲೇ ಎಂಜಿನಿಯರಿಂಗ್ ಮತ್ತು ಸಂಚಾರಕ್ಕೆ ಸಂಬಂಧಿಸಿದ ಪೂರ್ವಭಾವಿ ಸಮೀಕ್ಷೆ ಕಾರ್ಯ ಆರಂಭಿಸಲಾಗುವುದೆಂದು ದಕ್ಷಿಣ ಮಧ್ಯೆ ರೈಲ್ವೆಯ ಜನರಲ್ ಮ್ಯಾನೇಜರ್ ಎಂ.ಟಿ. ಲೀ ಅವರು ಇಂದು ಇಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT