ಸೋಮವಾರ, ಜನವರಿ 25, 2021
15 °C

ಪ್ರಜಾವಾಣಿ 50 ವರ್ಷಗಳ ಹಿಂದೆ: ಸೋಮವಾರ, 11–1–1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲೋಕಸಭೆ ಚುನಾವಣೆಗಳಿಗಾಗಿ ಕಮ್ಯುನಿಸ್ಟ್‌, ಲೀಗ್‌ ಜತೆ ಆಡಳಿತ ಕಾಂಗ್ರೆಸ್‌ ಸೇರದು

ನವದೆಹಲಿ, ಜ. 10– ಮಧ್ಯಂತರ ಚುನಾವಣೆಗಳಲ್ಲಿ ಆಡಳಿತ ಕಾಂಗ್ರೆಸ್‌ ಪಕ್ಷವು ಕಮ್ಯುನಿಸ್ಟರು ಅಥವಾ ಮುಸ್ಲಿಂ ಲೀಗಿನ ಜತೆ ಸೇರದೆಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಘೋಷಿಸಿ, ಪಕ್ಷವು ತನ್ನ ಧೋರಣೆ ಮತ್ತು ಕಾರ್ಯಕ್ರಮಗಳಿಗೆ ಬೆಂಬಲವಾಗಿ ಹೊಸ ಆ‌ದೇಶ ಪಡೆಯಲು ಸ್ವಶಕ್ತಿಯಿಂದ ಜನರ ಮುಂದೆ ನಿಲ್ಲುವುದೆಂದರು.

ತಮ್ಮ ನಿವಾಸದ ಸಮೀಪದಲ್ಲಿ ಸುಮಾರು 2,000 ಜನರನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಿದರು.

ಪಟೌಡಿ ವಿರುದ್ಧ ಲಾಲಾ

ನವದೆಹಲಿ, ಜ. 10– ಭಾರತದ ಟೆಸ್ಟ್‌ ಕ್ರಿಕೆಟ್‌ ಕ್ಯಾಪ್ಟನ್‌ ಆಗಿದ್ದ ಲಾಲಾ ಅಮರನಾಥ್‌ ಅವರು ಪಟೌಡಿ ನವಾಬ್‌ ವಿರುದ್ಧ ಹರಿಯಾಣದ ಗುರುಗಾಂವ್‌ ಕ್ಷೇತ್ರದಲ್ಲಿ ಲೋಕಸಭೆಗೆ ಸ್ಪರ್ಧಿಸುವ ಸಂಭವವಿದೆ.

ಲಾಲಾ ಅಮರನಾಥ್‌ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಬಹುದೆಂದು ಈ ಮೂಲಗಳು ಹೇಳಿವೆ. ಪಟೌಡಿಯವರು ವಿಶಾಲ ಹರಿಯಾಣ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಶುಕ್ರವಾರ ತಿಳಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು