ಪ್ರಜಾವಾಣಿ 50 ವರ್ಷಗಳ ಹಿಂದೆ| ಭಾನುವಾರ 14-02-1971

ಭಾರತವೇ ಪರಿಹಾರ ನೀಡಬೇಕೆಂದು ಪಾಕಿಸ್ತಾನದ ಒತ್ತಾಯ
ನವದೆಹಲಿ, ಫೆ. 13– ಭಾರತದ ಪ್ರದೇಶದ ಮೇಲೆ ಯಾನ ಮಾಡುವುದನ್ನು ನಿಷೇಧಿಸಿರುವುದರಿಂದ ತನ್ನ ವಿಮಾನಗಳ ಯಾನದ ವೆಚ್ಚ ಹೆಚ್ಚಿರುವುದರ ಕಾರಣ ತನಗೇ ಪರಿಹಾರ ಕೊಡಬೇಕೆಂದು ಪಾಕಿಸ್ತಾನವು ಇಂದು ಭಾರತವನ್ನು ಕೇಳಿದೆ.
ವಿಮಾನ ನಾಶಪಡಿಸಿರುವುದಕ್ಕೆ ಪರಿಹಾರ ಕೊಡಬೇಕೆಂಬ ಭಾರತದ ಬೇಡಿಕೆಯಿಂದ ಜಾರಿಕೊಳ್ಳುವುದೇ ಪಾಕಿಸ್ತಾನದ ಈ ಬೇಡಿಕೆಯ ಉದ್ದೇಶವಾಗಿದೆ.
ಇಸ್ಲಾಮಾಬಾದಿನಲ್ಲಿರುವ ವಿದೇಶಾಂಗ ಕಚೇರಿಗೆ ಭಾರತೀಯ ಹೈಕಮೀಷನರ್ ಶ್ರೀ ಬಿ.ಕೆ. ಆಚಾರ್ಯ ಅವರನ್ನು ಕರೆಸಿ ನೀಡಿದ ಪತ್ರದಲ್ಲಿ ಪಾಕಿಸ್ತಾನ ಸರ್ಕಾರವು ವಿಮಾನಯಾನದ ಪ್ರಶ್ನೆಯನ್ನು ಸೌಹಾರ್ದ ಹಾಗೂ ಸಂಧಾನದ ಮೂಲಕ ಇತ್ಯರ್ಥಪಡಿಸಬೇಕೆಂಬ ತನ್ನ ಕೋರಿಕೆಯನ್ನು ಪುನರುಚ್ಚರಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.