ಶನಿವಾರ, ಮೇ 21, 2022
20 °C

25 ವರ್ಷಗಳ ಹಿಂದೆ: ಭಾನುವಾರ 11 ಮೇ 1997

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿ.ಎಲ್‌.ಶಂಕರ್‌ ರಾಜ್ಯ ಜನತಾ ದಳ ಅಧ್ಯಕ್ಷ

ಬೆಂಗಳೂರು, ಮೇ.10– ಭಿನ್ನಮತೀಯರ ತೀವ್ರ ಅಸಮಾಧಾನದ ನಡುವೆ ಮುಖ್ಯಮಂತ್ರಿ ಜೆ.ಎಚ್‌.ಪಟೇಲ್‌ ಅವರು ಚುನಾವಣಾ ಕಣದಲ್ಲಿದ್ದ ಇಬ್ಬರು ಅಭ್ಯರ್ಥಿಗಳ ಮನವೊಲಿಸಿದ ಫಲವಾಗಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಆಪ್ತ ಸಂಸದ ಬಿ.ಎಲ್‌.ಶಂಕರ್‌ ಅವರು ರಾಜ್ಯ ಜನತಾದಳದ ಅಧ್ಯಕ್ಷರಾಗಿ ಅವಿರೋಧವಾಗಿ ಇಂದು ಆಯ್ಕೆಯಾದರು.

ಈ ಆಯ್ಕೆಯೊಂದಿಗೆ ಕಳೆದ ಒಂದು ವಾರದಿಂದ ಕಾಡಿದ್ದ ಪಕ್ಷದಲ್ಲಿನ ಗೊಂದಲಕ್ಕೆ ಅಂತಿಮ ತೆರೆ ಎಳೆದಂತಾಗಿದೆ. 

ಭಿನ್ನಮತೀಯ ಮುಖಂಡ ಹಾಗೂ ಮಾಜಿ ಸಚಿವ ಬಿ.ಆರ್‌.ಯಾವಗಲ್‌ ಹಾಗೂ ಮಾಜಿ ಶಾಸಕ ಬಿ.ಆರ್‌.ನೀಲಕಂಠಪ್ಪ ಅವರು ಸ್ಪರ್ಧೆಯಿಂದ ತಮ್ಮ ನಾಮಪತ್ರಗಳನ್ನು ಹಿಂತೆಗೆದುಕೊಂಡರು.

ಇರಾನ್‌ ಭೂಕಂಪ: 1 ಸಾವಿರ ಸಾವು

ದುಬೈ, ಮೇ.10 (ಪಿಟಿಐ)– ಇರಾನಿನ ಖೋರಸಾನ್‌ ಪ್ರಾಂತ್ಯದಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ಭಾರಿ ಭೂಕಂಪದಲ್ಲಿ ಸಾವಿರಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.