ಗುರುವಾರ , ಮಾರ್ಚ್ 30, 2023
32 °C

25 ವರ್ಷಗಳ ಹಿಂದೆ: ಶನಿವಾರ 2.11.1996

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಪ್ರಧಾನಿಯಿಂದ ನೈರುತ್ಯ ರೈಲ್ವೆ ವಲಯ ಉದ್ಘಾಟನೆ

ಬೆಂಗಳೂರು, ನ. 1– ರಾಜ್ಯದ ಪುನರ್ ವಿಂಗಡಣೆಯಾದ ನಂತರ ಜನತೆಯ ಹಲವು ವರ್ಷಗಳ ಕನಸಾಗಿದ್ದ ನೈರುತ್ಯ
ರೈಲ್ವೆ ವಲಯವನ್ನು ಪ್ರಧಾನ ಮಂತ್ರಿ ಎಚ್.ಡಿ. ದೇವೇಗೌಡ ಅವರು ಇಂದು ಇಲ್ಲಿ ವಿಧ್ಯುಕ್ತವಾಗಿ ಉದ್ಘಾಟಿಸಿದರು.

‘ಸುಂದರ– ಸಮೃದ್ಧ– ಸ್ವಾಭಿಮಾನ ಕರ್ನಾಟಕ ಕಟ್ಟಲು ಸಣ್ಣಪುಟ್ಟ ಭೇದಗಳನ್ನು ಮರೆತು ಒಂದಾಗಿ ದುಡಿಯೋಣ’ ಎಂದು ಅವರು ಈ ಸಂದರ್ಭದಲ್ಲಿ ಕರೆ ನೀಡಿದರು.

ಧಾರವಾಡ ಬಂದ್ ವಿಫಲ

ಧಾರವಾಡ, ನ. 1– ನೈರುತ್ಯ ರೈಲ್ವೆ ವಲಯ ಮತ್ತು ಹೈಕೋರ್ಟ್ ಪೀಠವನ್ನು ಹುಬ್ಬಳ್ಳಿ– ಧಾರವಾಡ ನಗರಗಳಲ್ಲಿ ಆರಂಭಿಸುವ ಬಗ್ಗೆ ರಾಜ್ಯ ಸರ್ಕಾರ ತಾಳಿರುವ ಮಲತಾಯಿ ಧೋರಣೆಯನ್ನು ವಿರೋಧಿಸಿ ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿ ಯುವ ವೇದಿಕೆ ‘ಧಾರವಾಡ ನಗರ ಬಂದ್‌’ಗೆ ನೀಡಿದ್ದ ಕರೆಗೆ ಇಂದು ಜನರು ಪ್ರತಿಕ್ರಿಯೆ ನೀಡಲಿಲ್ಲ.

ಬಂದ್‌ಗೆ ಕರೆ ನೀಡಿ ನಿನ್ನೆ ಕರಪತ್ರಗಳ ಮೂಲಕ ಜನರ ಸಹಕಾರವನ್ನು ಪಡೆಯಲು ಪ್ರಯತ್ನಿಸಿದ್ದ ವೇದಿಕೆಯ ಮೂವರು ಮುಖಂಡರು ಮತ್ತು ಇತರ 15 ಜನರನ್ನು ಪೊಲೀಸರು ನಿನ್ನೆ ರಾತ್ರಿ 2 ಗಂಟೆ ವೇಳೆಗೆ ಬಂಧಿಸಿ ಅವರನ್ನು ಹುಬ್ಬಳ್ಳಿಯ ಪೊಲೀಸ್ ಠಾಣೆಯಲ್ಲಿ ಇರಿಸಿದ್ದರಿಂದ ಬಂದ್ ಆರಂಭಿಸುವ ಪ್ರಯತ್ನಗಳನ್ನು ಯಾರೂ ಮಾಡಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು