ಶುಕ್ರವಾರ, ಡಿಸೆಂಬರ್ 3, 2021
26 °C
25 ವರ್ಷಗಳ ಹಿಂದೆ ಶನಿವಾರ 26.10.1996

25 ವರ್ಷಗಳ ಹಿಂದೆ ಶನಿವಾರ 26.10.1996

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಲಮಟ್ಟಿ: ಪರಿಶೀಲನೆಗೆ 14ರಂದು ತಜ್ಞರ ತಂಡ

ನವದೆಹಲಿ, ಅ. 25 (ಪಿಟಿಐ)– ಆಲಮಟ್ಟಿ ಅಣೆಕಟ್ಟು ವಿವಾದದ ಕುರಿತು ಅಧ್ಯಯನ ನಡೆಸುವ ಸಲುವಾಗಿ ನೀರಾವರಿ ತಜ್ಞರ ನಿಯೋಗವೊಂದು ಮುಂದಿನ ತಿಂಗಳು 14ರಂದು ವಿವಾದಾಸ್ಪದ ಸ್ಥಳಕ್ಕೆ ಭೇಟಿ ನೀಡಲಿದೆ.

ಬಚಾವತ್ ಆಯೋಗದ ತೀರ್ಪನ್ನು ಉಲ್ಲಂಘಿಸಿ ಕರ್ನಾಟಕವು ಆಲಮಟ್ಟಿ ಅಣೆ ಕಟ್ಟಿನ ಎತ್ತರವನ್ನು ಹೆಚ್ಚಿಸುತ್ತಿದೆ ಎಂದು ಆಂಧ್ರಪ್ರದೇಶ ಆರೋಪಿಸಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ಅಧ್ಯಯನಕ್ಕಾಗಿ ಕಳೆದ ಆಗಸ್ಟ್‌ನಲ್ಲಿ ಸಂಯುಕ್ತರಂಗ ಸರ್ಕಾರ ತಜ್ಞರ ನಿಯೋಗ ವನ್ನು ನೇಮಿಸಿತ್ತು.

ಚಿತ್ರದುರ್ಗ ದುರಂತ: ನೀರಿನಿಂದ 61 ಶವ ಮೇಲಕ್ಕೆ– ಮುಂದುವರಿದ ಶೋಧನೆ

ಚಿತ್ರದುರ್ಗ, ಅ. 25– ಚಿತ್ರದುರ್ಗದ ಸಂತೆ ಹೊಂಡದಲ್ಲಿ ಪ್ರಯಾಣಿಕರ ಸಹಿತ ಮುಳುಗಿ ಹೋಗಿದ್ದ ಬಸ್ಸನ್ನು ಮೇಲಕ್ಕೆ ಎತ್ತಲಾಗಿದ್ದು ಈವರೆಗೆ 61 ಶವಗಳನ್ನು ಹೊರತೆಗೆಯಲಾಗಿದೆ. ಇನ್ನೂ ನೀರಿನಲ್ಲಿ ಉಳಿದಿರಬಹುದಾದ ಶವಗಳಿಗಾಗಿ ಶೋಧನೆ ಮುಂದುವ ರಿದಿದೆ. ಹೊರ ತೆಗೆದ ಶವಗಳನ್ನು ಅವರ ಕುಟುಂಬದವರು ಗುರುತಿಸಿದ್ದು ಅಂತಿಮ ಸಂಸ್ಕಾರಕ್ಕಾಗಿ ಅವರಿಗೆ ಒಪ್ಪಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.