ಗುರುವಾರ , ಜೂನ್ 30, 2022
24 °C

50 ವರ್ಷಗಳ ಹಿಂದೆ: ಭಾನುವಾರ, ಮೇ 28, 1972

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರಭಾರೆ ಮಾಡಿದ ಜಮೀನು ಮತ್ತೆ ತೋಟಿ ತಳವಾರರಿಗೆ
ಬೆಂಗಳೂರು, ಮೇ 27–
ಸರ್ಕಾರದಿಂದ ಪಡೆದ ಜಮೀನನ್ನು ಪರಭಾರೆ ಮಾಡಿರುವ ತೋಟಿ, ತಳವಾರರಿಗೆ ಮತ್ತೆ ಅವರ ಜಮೀನು ಅವರಿಗೆ ದೊರೆಯುವಂತೆ ಪ್ರಯತ್ನ ಮಾಡಬೇಕೆಂದು ಇಂದು ನಡೆದ ರಾಜ್ಯದ ಮಂತ್ರಿಮಂಡಲದ ಸಭೆ ತೀರ್ಮಾನಿಸಿತು.

ಈ ಉದ್ದೇಶ ಸಾಧನೆಗಾಗಿ ಗ್ರಾಮಾಧಿಕಾರಿಗಳಿಗೆ ಸಂಬಂಧಿಸಿದ ಶಾಸನವನ್ನು ತಿದ್ದುಪಡಿ ಮಾಡಬೇಕೆಂದು ತಾತ್ವಿಕವಾಗಿ ನಿರ್ಧರಿಸಿತು.

ಶೀಘ್ರವೇ ಅಮೆರಿಕ ರಷ್ಯಾ ಎರಡನೇ ಸುತ್ತು ಮಾತುಕತೆ
ಹೆಲ್ಸಿಂಕಿ, ಮೇ 27–
ಅಮೆರಿಕ ಮತ್ತು ರಷ್ಯಾಗಳು ಶಸ್ತ್ರಾಸ್ತ್ರ ಮಿತಿ ಕುರಿತ ಮಾತುಕತೆಯ ಎರಡನೇ ಹಂತದ ಸಂಧಾನವನ್ನು ಕೆಲವೇ ತಿಂಗಳಲ್ಲಿ ಆರಂಭಿಸಲಿವೆ. ಮುಂದಿನ ಸುತ್ತು ಮಾತುಕತೆ ವಿಯನ್ನಾದಲ್ಲಿ ನಡೆಯುವ ನಿರೀಕ್ಷೆ ಇದೆ.

ಮಾರಕ ಶಸ್ತ್ರಾಸ್ತ್ರ ಮಿತಿ ಕುರಿತ ತಾತ್ಕಾಲಿಕ ಒಪ್ಪಂದವನ್ನು ಸಾಕಷ್ಟು ಪುಷ್ಟಿಯುತವನ್ನಾಗಿ ಮಾಡುವುದೇ ಎರಡನೇ ಹಂತದ ಮುಖ್ಯ ಉದ್ದೇಶ ಎಂದೂ ತಿಳಿದು ಬಂದಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು