50 ವರ್ಷಗಳ ಹಿಂದೆ: ಬುಧವಾರ 3.11.1971

ಇಪ್ಪತ್ತನಾಲ್ಕು ಮಂದಿಗೆ ಸನ್ಮಾನ
ಬೆಂಗಳೂರು, ನ. 2– ಕನ್ನಡ ನಾಡಿನ ಚೆಲುವಿಗೆ ಕಾರಣರಾದ 24 ಮಂದಿ ಕಲಾವಿದರು, ಸಾಹಿತಿಗಳನ್ನು ಇಂದು ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ಜನತೆಯ ಪರವಾಗಿ ಸನ್ಮಾನಿಸಿ ಅವರ ಸೇವೆಯನ್ನು ಕೃತಜ್ಞತೆಯಿಂದ ನೆನೆಯಲಾಯಿತು.
ರಾಜ್ಯದ ಮೂರು ಅಕಾಡೆಮಿಗಳ ಪರವಾಗಿ ಪ್ರಶಸ್ತಿಗಳನ್ನು ನೀಡಿದ ರಾಜ್ಯಪಾಲರು, ಕಲಾವಿದರು ವಯಸ್ಸಾಗುವ
ವರೆಗೆ ಕಾಯದೆ, ಅವರು ಪಾಂಡಿತ್ಯ– ಪ್ರತಿಭೆ ಗಳಿಸಿದ ತರುಣದಲ್ಲೇ ಅವರನ್ನು ಗುರುತಿಸಿ ಸನ್ಮಾನಿಸಬೇಕೆಂದು ಸಲಹೆ ಮಾಡಿದರು.
‘ಕಲಾವಿದರಿಗೆ ತುಂಬಾ ವಯಸ್ಸಾಗದ ಕಾರಣ ಅವರನ್ನು ಗೌರವಿಸಬಾರದೆಂಬ ಭಾವನೆ ನಮ್ಮಲ್ಲಿದೆ. ಇದಕ್ಕೆ ಕಾರಣ ತಿಳಿಯದು. ಕಲಾವಿದ ತಾರುಣ್ಯದಲ್ಲೇ ಪ್ರತಿಭೆಯನ್ನು ಗಳಿಸುತ್ತಾನೆ. ಆತ ಪ್ರತಿಭೆ ಗಳಿಸಿದ ಕಾಲದಲ್ಲಿ ಅವನಿಗೆ ಪ್ರಶಸ್ತಿ ಸಲ್ಲಬೇಕಾದುದು ಉಚಿತವಾದದ್ದು’ ಎಂದು ಒತ್ತಿ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.