ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಶುಕ್ರವಾರ, 16–7–1971

Last Updated 15 ಜುಲೈ 2021, 19:30 IST
ಅಕ್ಷರ ಗಾತ್ರ

ಕಾವೇರಿ: ಬಲವಂತವಾದರೆ ಉಭಯ ರಾಜ್ಯಗಳ ಮಧುರ ಬಾಂಧವ್ಯಕ್ಕೆ ಧಕ್ಕೆ

ಬೆಂಗಳೂರು, ಜುಲೈ 15– ಮೈಸೂರು ರಾಜ್ಯದಲ್ಲಿ ಮಧ್ಯಕಾಲದ ಸರ್ಕಾರ ಆಡಳಿತದಲ್ಲಿರುವಾಗ, ಕಾವೇರಿ ವಿವಾದದ ಬಗ್ಗೆ ಬಲವಂತದಿಂದ ತೀರ್ಮಾನಕ್ಕೆ ಬರಲು ತಮಿಳುನಾಡು ಸರ್ಕಾರ ಪ್ರಯತ್ನಿಸುವುದು ನ್ಯಾಯವಾದುದಲ್ಲವೆಂದೂ, ಇದರಿಂದ ಎರಡು ರಾಜ್ಯಗಳ ನಡುವೆ ಇರುವ ಮಧುರ ಬಾಂಧವ್ಯಕ್ಕೆ ಧಕ್ಕೆ ಉಂಟಾಗುವುದೆಂದೂ ರಾಜ್ಯದ ಆಡಳಿತ ಕಾಂಗ್ರೆಸ್ಸಿನ ಸಮಾಜವಾದಿ ಕಾರ್ಯಾಚರಣೆ ವೇದಿಕೆ ತಿಳಿಸಿದೆ.

ಆವೇಶಪೂರಿತ: ಕಾವೇರಿ ವಿವಾದದ ಬಗ್ಗೆ ತಮಿಳುನಾಡು ವಿಧಾನಮಂಡಲ ಅಂಗೀಕರಿಸಿರುವ ನಿರ್ಣಯ ಆವೇಶದಿಂದ ಕೂಡಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ನದಿನೀರಿನ ಹಕ್ಕುಗಳನ್ನು ಕರಾರುವಕ್ಕಾದ ಅಂಕಿ ಅಂಶಗಳ ಆಧಾರದ ಮೇಲೆ ಮಾತ್ರ ಚರ್ಚಿಸಲು ಸಾಧ್ಯವೆಂದೂ ಅಂಕಿ ಅಂಶಗಳ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೆ ಅವನ್ನು ನಿಷ್ಪಕ್ಷತವಾದ ಸಮಿತಿ ಪರಿಶೀಲಿಸಿ ತೀರ್ಮಾನಿಸ
ಬೇಕಾಗಿದೆ ಎಂದು ಸಮಿತಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT