ಬುಧವಾರ, ಆಗಸ್ಟ್ 10, 2022
25 °C

ಪ್ರಜಾವಾಣಿ 50 ವರ್ಷಗಳ ಹಿಂದೆ| ಭಾನುವಾರ, 25-06-1972

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದ ನಿಲುವಿನಲ್ಲಿ ಬದಲಾವಣೆ ಇಲ್ಲ

ಬೆಂಗಳೂರು, ಜೂನ್‌ 24 – ಮಹಾಜನ್‌ ವರದಿ ವಿಚಾರದಲ್ಲಿ ಸರಕಾರದ ನಿಲುವು ಎಳ್ಳಷ್ಟೂ ಬದಲಾಗಿಲ್ಲವೆಂದು ಲೋಕೋಪಯೋಗಿ ಸಚಿವ ಶ್ರೀ ಎಚ್‌. ಎಂ. ಚನ್ನಬಸ‍‍ಪ್ಪನವರು ಇಂದು ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದರು.

ವಿಶಾಲ ಗೋಮಾಂಯತಕ ರಾಜ್ಯ ನಿರ್ಮಾಣವಾಗಬೇಕೇಂದು ಶ್ರೀ ಆರ್‌.ಡಿ. ಕಿತ್ತೂರ್‌ ಹೇಳಿದರೆಂಬ ವರದಿಗಳ ಬಗ್ಗೆ ಶ್ರೀ ಕಾಗೋಡು ತಿಮ್ಮಪ್ಪನವರು ಗಮನ ಸೆಳೆಯುವ ಸೂಚನೆ ಮಂಡಿಸಿದಾಗ ಉತ್ತರ ನೀಡಿದ ಸಚಿವರು, ‘ಶ್ರೀ ಕಿತ್ತೂರ್ ಅವರೇ ಅದನ್ನು ನಿರಾಕರಿಸಿದ್ದಾರೆ. ಮರಾಠಿ ಪತ್ರಿಕೆಗಳಲ್ಲಿ ಬಂದ ವರದಿಗಳನ್ನು ಆಧಾರವಾಗಿಟ್ಟು ಅವರ ಮೇಲೆ ಆರೋಪ ಮಾಡಲಾಗಿತ್ತು. ಅವರೇ ಅಲ್ಲಗಳೆದಿರುವುದರಿಂದ ಏನನ್ನೂ ಹೇಳಲಾರೆ’ ಎಂದರು.

ಬಳ್ಳಾರಿ ಖಜಾನೆಗೆ ಲಕ್ಷ ರೂ. ವಂಚನೆ: ಮೂವರ ಬಂಧನ

ಬೆಂಗಳೂರು, ಜೂನ್‌ 24 – ನಕಲಿ ಬಿಲ್ಲುಗಳನ್ನು ಉಪಯೋಗಿಸಿ ಬಳ್ಳಾರಿಯ ಸರ್ಕಾರಿ ಖಜಾನೆಗೆ ಒಂದು ಲಕ್ಷ ರೂಪಾಯಿಗಿಂತ ಹೆಚ್ಚು ಹಣ ವಂಚಿಸಿದ ತಂಡವೊಂದನ್ನು ರಾಜ್ಯದ ಸಿ.ಐ.ಡಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ಈ ಸಂಬಂಧದಲ್ಲಿ ಬಳ್ಳಾರಿ ಸರ್ಕಾರಿ ಖಜಾನೆಯ ಒಬ್ಬ ಅಧಿಕಾರಿ, ಒಬ್ಬ ಪೇದೆಯನ್ನು ಸೇರಿಸಿ ಮೂವರನ್ನು ಬಂಧಿಸಲಾಗಿದ್ದು, ಇನ್ನೂ ಕೆಲವರನ್ನು ಬಂಧಿಸುವ ನಿರೀಕ್ಷೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು