ಓದುಗರ ಪಾಲಿಗೆ ರಮಾಕಾಂತ ಜೋಶಿ. ಗಿರೀಶ ಕಾರ್ನಾಡ, ಎ.ಕೆ.ರಾಮಾನುಜನ್, ಯು.ಆರ್.ಅನಂತಮೂರ್ತಿ, ಚಂದ್ರಶೇಖರ ಕಂಬಾರ, ಗಿರಡ್ಡಿ ಗೋವಿಂದರಾಜ, ಚಂದ್ರಶೇಖರ ಪಾಟೀಲ ಅಷ್ಟೇ ಅಲ್ಲ, ದ.ರಾ.ಬೇಂದ್ರೆ, ಎಂ.ಎಂ.ಕಲಬುರ್ಗಿ, ಚನ್ನವೀರ ಕಣವಿ ಮತ್ತಿತರರಿಗೆ ‘ರಾಮ’. ಅಟ್ಟದ (ಮನೋಹರ ಗ್ರಂಥಮಾಲಾದ ಮಹಡಿ) ನನ್ನಂತಹ ಕೆಲ ಸ್ನೇಹಿತರಿಗೆ ‘ರಾಮಣ್ಣ’. ಅವರು ಈಗ ನಮ್ಮೊಂದಿಗೆ ಇಲ್ಲ ಎಂಬುದು ನಂಬಲು ಆಗುತ್ತಿಲ್ಲ.

ರಾಮಣ್ಣ ಇದ್ದಿದ್ದು ಹಾಗೆ. ಅವರ ಕ್ರಿಯಾಶೀಲತೆ, ಶಿಸ್ತುಬದ್ಧ ಕೆಲಸ, ಪ್ರಾಮಾಣಿಕ ನಡವಳಿಕೆ, ಪಾರದರ್ಶಕತೆ, ಸ್ಪಷ್ಟ ಮತ್ತು ನಿರ್ದಿಷ್ಟ ಮಾತುಗಳು ಎಲ್ಲವೂ ಅವರನ್ನು ಬಹು ಎತ್ತರಕ್ಕೆ ಒಯ್ದಿದ್ದವು.

ರಮಾಕಾಂತ ಜೋಶಿ ಅವರು ಧಾರವಾಡದ ಕರ್ನಾಟಕ ವಿದ್ಯಾಲಯದಲ್ಲಿ ಬಿ.ಎ, ಗುಜರಾತ್ನ ಸರ್ದಾರ್ ಪಟೇಲ್ ವಿಶ್ವವಿದ್ಯಾಲಯದಲ್ಲಿ ಎಂ.ಎ ಮತ್ತು ಪಿಎಚ್.ಡಿ ಪದವಿ ಪಡೆದಿದ್ದರು. ಕಿಟೆಲ್ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಯನ ವಿಭಾಗದ ಪ್ರಾಧ್ಯಾಪಕರು, ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿ, 1994ರಲ್ಲಿ ನಿವೃತ್ತರಾದರು. ತಂದೆ ಜಿ.ಬಿ.ಜೋಶಿ ಅವರು 1993ರಲ್ಲಿ ನಿಧನರಾದ ಬಳಿಕ ಮನೋಹರ ಗ್ರಂಥಮಾಲಾ ಜವಾಬ್ದಾರಿ ವಹಿಸಿಕೊಂಡರು. ಗ್ರಂಥಮಾಲಾದಿಂದ ಬಹಳಷ್ಟು ಸಾಹಿತ್ಯಿಕ ಚಟುವಟಿಕೆಗಳನ್ನು ನಡೆಸಿದರು. ಜಿ.ಬಿ. ಅವರಂತೆ ಹೊಸ ಲೇಖಕರನ್ನು ಹುಡುಕಿ, ಕೃತಿಗಳನ್ನು ಪ್ರಕಟಿಸಿದರು.

ಮನೋಹರ ಗ್ರಂಥಮಾಲಾದ ವ್ಯವಸ್ಥಾಪಕ ಸಂಪಾದಕರಾದ ಬಳಿಕ ಅನೇಕರ ಸಮಗ್ರ ಸಾಹಿತ್ಯವನ್ನು ಅವರ ಕುಟುಂಬದ ಅನುಮತಿ ಪಡೆದು, ಪ್ರಕಟಿಸಿದರು. ಗಳಗನಾಥ, ಸದಾಶಿವರಾವ ಗರುಡ, ವಾಮನರಾವ ಸವಣೂರ, ದ.ಬಾ.ಕುಲಕರ್ಣಿ, ರಾಘವೇಂದ್ರ ಖಾಸನೀಸ ಮೊದಲಾದವರ ಕಾದಂಬರಿ, ನಾಟಕ, ಕತೆ, ಪ್ರಬಂಧ ಮೊದಲಾದ ಸಮಗ್ರ ಸಾಹಿತ್ಯವನ್ನು ಹೊರತಂದರು.

ರಮಾಕಾಂತ ಜೋಶಿಯವರು ಸ್ವತಃ ಉತ್ತಮ ಬರಹಗಾರರು. ದೀನಾನಾಥ ಮಲ್ಹೋತ್ರಾ ಅವರ ‘ಬುಕ್ ಪಬ್ಲಿಷಿಂಗ್’ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದರು. ನಾನು ಬರೆದ ‘ಜಿ.ಬಿ.ಜೋಶಿ’ ಕೃತಿಯನ್ನು ರಮಾಕಾಂತ ಅವರು ಇಂಗ್ಲಿಷ್ಗೆ ಅನುವಾದಿಸಿದ್ದರು. ಇದನ್ನು ನ್ಯಾಷನಲ್ ಬುಕ್ ಟ್ರಸ್ಟ್ ಶೀಘ್ರದಲ್ಲೇ ಪ್ರಕಟಿಸಲಿದೆ.

ದೀನಾನಾಥ ಮಲ್ಹೋತ್ರಾ ಅವರ ‘ಬುಕ್ ಪಬ್ಲಿಷಿಂಗ್’ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದರು. ‘ಎ.ಕೆ.ರಾಮಾನುಜನ್ ಸಮಗ್ರ ಸಂಪುಟ’, ‘ರಾಘವೇಂದ್ರ ಖಾಸನೀಸ ಸಮಗ್ರ’, ‘ಒಂದಿಷ್ಟು ಹೊಸ ಕತೆಗಳು’ ‘ಸವಣೂರ ವಾಮನರಾವ ಸಮಗ್ರ ನಾಟಕ’, ಮೊದಲಾದ ಕೃತಿಗಳನ್ನು ಸಂಪಾದಿಸಿದ್ದಾರೆ. ‘ಮಿಥ್ ಇನ್ ಇಂಡಿಯನ್ ಡ್ರಾಮಾ’ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ.

ನವದೆಹಲಿಯ ಭಾರತೀಯ ಪ್ರಕಾಶಕರ ಒಕ್ಕೂಟದ 'ವಿಶಿಷ್ಟ ಪ್ರಕಾಶಕ ಪ್ರಶಸ್ತಿ', ಕನ್ನಡ ಪುಸ್ತಕ ಪ್ರಾಧಿಕಾರದ ‘ಅತ್ಯುತ್ತಮ ಪ್ರಕಾಶನ’ ಪ್ರಶಸ್ತಿ, 'ಆಳ್ವಾ ನುಡಿಸಿರಿ' ಪ್ರಶಸ್ತಿ ಸೇರಿ ಹಲವು ಪುರಸ್ಕಾರಗಳು ಸಂದಿವೆ. ರಮಾಕಾಂತ ಜೋಶಿ ಅವರ ಅಗಲಿಕೆಯಿಂದ ಈಗ ‘ಮನೋಹರ ಗ್ರಂಥಮಾಲಾದ ಮಹಡಿ’ಯಲ್ಲಿ ಮೌನ ಆವರಿಸಿದೆ.

ರಮಾಕಾಂತ ಜೋಶಿ ಇನ್ನಿಲ್ಲ

ಧಾರವಾಡ: ನಗರದ ಮನೋಹರ ಗ್ರಂಥಮಾಲಾ ಪ್ರಕಾಶನದ ಸಂಪಾದಕ, ಪ್ರಕಾಶಕ, ಲೇಖಕ ಮತ್ತು ನಿವೃತ್ತ ಪ್ರಾಧ್ಯಾಪಕ ಪ್ರೊ.ರಮಾಕಾಂತ ಜಿ. ಜೋಶಿ (89) ಅವರು ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಶನಿವಾರ ನಿಧನರಾದರು.

ಅವರಿಗೆ ಪತ್ನಿ, ಪುತ್ರ ಮತ್ತು ಇಬ್ಬರು ಪುತ್ರಿಯವರು ಇದ್ದಾರೆ. ನಗರದ ಮಂಗಳವಾರಪೇಟೆಯ ಮೆಣಸಿನಕಾಯಿ ಓಣಿಯ ಅವರ ಸ್ವಗೃಹದಲ್ಲಿ ಭಾನುವಾರ (ಮೇ 18) ಬೆಳಿಗ್ಗೆ 9 ರಿಂದ 10ರವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಹೊಸಯಲ್ಲಾಪುರ ರುದ್ರಭೂಮಿ
ಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.