ಸುಮಲತಾ ಸ್ಪರ್ಧೆ: ಅಂಬಿ ನೆರವಿಗೆ ಸ್ಪಂದನೆ

7

ಸುಮಲತಾ ಸ್ಪರ್ಧೆ: ಅಂಬಿ ನೆರವಿಗೆ ಸ್ಪಂದನೆ

Published:
Updated:

ದಿವಂಗತ ಅಂಬರೀಷ್ ಅವರ ಪತ್ನಿ ಸುಮಲತಾ ಅವರನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಸಲು ಕಾಂಗ್ರೆಸ್ ಪಕ್ಷ ಆಲೋಚಿಸುತ್ತಿರುವ ಬೆನ್ನಲ್ಲೇ, ಚಿತ್ರರಂಗ ಸುಮಲತಾ ಅವರ ಬೆಂಬಲಕ್ಕೆ ನಿಂತಿರುವುದು (ಪ್ರ.ವಾ., ಫೆ. 4) ಒಳ್ಳೆಯ ಬೆಳವಣಿಗೆ. ಈ ನಿಟ್ಟಿನಲ್ಲಿ ನಟ ದರ್ಶನ್ ಅವರು ಕಾಂಗ್ರೆಸ್‌ ಮುಖಂಡ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ರಾಜಕೀಯ ಪಕ್ಷಗಳಿಗೆ ಆಕರ್ಷಣೆಯ ವ್ಯಕ್ತಿಯಾಗಿದ್ದ ಅಂಬಿ, ಮನೆ ಬಾಗಿಲಿಗೇ ಚುನಾವಣಾ ಟಿಕೆಟ್‌ ತರಿಸಿಕೊಳ್ಳುವಂತಹ ವಿಶೇಷ ವ್ಯಕ್ತಿಯಾಗಿದ್ದರು. ಜೊತೆಗೆ, ಕನ್ನಡ ಸಿನಿಮಾ ರಂಗದ ಬಿಕ್ಕಟ್ಟುಗಳಿಗೆ ಮುಂಚೂಣಿಯಲ್ಲಿದ್ದು ಪರಿಹಾರ ಕಲ್ಪಿಸುತ್ತಿದ್ದರು. ಈಗ ಕನ್ನಡ ಚಿತ್ರರಂಗ ಅಂಬಿ ಕುಟುಂಬದ ಬೆಂಬಲಕ್ಕೆ ನಿಂತಿರುವುದು ಉತ್ತಮ ಬೆಳವಣಿಗೆ.

–ಶ್ರೀಧರ್ ಡಿ. ರಾಮಚಂದ್ರಪ್ಪ, ತುರುವನೂರು, ಚಿತ್ರದುರ್ಗ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !