ಬುಧವಾರ, ಮೇ 25, 2022
29 °C

ವಿಷಗಾಳಿ ತಡೆದ ವೈಮಾನಿಕ ಪ್ರದರ್ಶನ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು ವೇದಿಕೆಯಾಗಿದ್ದ ಅದ್ಭುತ ಹಾಗೂ ವೀರೋಚಿತವಾದ ಭಾರತೀಯ ವೈಮಾನಿಕ ಪ್ರದರ್ಶನವನ್ನು ಲಕ್ಷಾಂತರ ಜನ ಕಣ್ತುಂಬಿಕೊಂಡೆವು. ಗಗನದೆತ್ತರಕ್ಕೆ ನಮ್ಮ ಸಾಧನೆಗಳು ವಿಜೃಂಭಿಸಿದವು. ನಿತ್ಯ ನಾವು ಅನುಭವಿಸುವ ಮಾನವೀಯ ವಿಷಗಾಳಿಗಳಾದ ಪಕ್ಷ ಸಂಘರ್ಷ, ಜಾತಿ ಸಂಘರ್ಷ ಹಾಗೂ ದುಡ್ಡಿನ ಹಪಹಪಿಗಳಿಂದ ಕೆಲಕ್ಷಣವಾದರೂ ಬಿಡುಗಡೆ ಪಡೆದು, ಎತ್ತರೆತ್ತರಕ್ಕೆ ಏರಿ, ನಮ್ಮ ವಿಜ್ಞಾನಿಗಳ ಸಾಧನೆಗಳನ್ನು ಕಣ್ಣಾರೆ ಕಂಡು ಮೈಮರೆತೆವು. ಇಂಥ ವೀರೋಚಿತ ಸಾಧನೆಗಳಿಂದ ನಮ್ಮ ನಿತ್ಯ ಬದುಕಿನ ಜಡತ್ವವನ್ನು, ದ್ವಂದ್ವಗಳನ್ನು ಕಳೆದ ಆ ವೈಮಾನಿಕ ಸಾಹಸಿಗಳಿಗೆ, ವಿಜ್ಞಾನಿಗಳಿಗೆ ನಮ್ಮೆಲ್ಲರ ಹೃದಯತುಂಬಿದ ಅಭಿನಂದನೆ.

- ಪ್ರೊ. ಜಿ.ಎಚ್.ಹನ್ನೆರಡುಮಠ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು