ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಕ್ತರಿಗೆ ಇಲ್ಲದ ಮನಃಸ್ಥಿತಿ

Last Updated 5 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಮಥುರಾದಲ್ಲಿ ಮದ್ಯ, ಮಾಂಸಾಹಾರ ಮಾರಾಟ ನಿಷೇಧಕ್ಕೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮುಂದಾಗಿದ್ದಾರೆ ಎಂಬ ಸುದ್ದಿಗೆ ಬಾಲಕೃಷ್ಣ ಎಂ.ಆರ್. ಪ್ರತಿಕ್ರಿಯಿಸಿ, ‘ಹೀಗೆ ಮಾಡಿದರೆ ಅಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಕಡಿಮೆಯಾಗುತ್ತದೆ. ಆದಿತ್ಯನಾಥ ಅವರು ಜನರನ್ನು ಸನ್ಯಾಸಿ ಮಾಡಲು ಹೊರಟಿದ್ದಾರೆ’ ಎಂದು ಹೇಳಿರುವುದು ಸರಿಯಲ್ಲ. ಮಾಂಸಾಹಾರ, ಮದ್ಯ ಸೇವಿಸದಿರುವವರೆಲ್ಲ ಸನ್ಯಾಸಿಗಳೇನೂ ಆಗಿರುವುದಿಲ್ಲ.

ಮಾಂಸಾಹಾರ, ಮದ್ಯ ಸೇವನೆಗೆ ಧಾರ್ಮಿಕ ಕ್ಷೇತ್ರವೇ ಆಗಬೇಕೆಂದೇನೂ ಇಲ್ಲ. ಅಲ್ಲಿಗೆ ನಾವು ಹೋಗುವುದು ಇಂಥ ದುಶ್ಚಟಗಳ ಆವಾಹನೆಗಲ್ಲ. ಧಾರ್ಮಿಕ ಕ್ಷೇತ್ರದಲ್ಲಿ ಭಕ್ತರು ತಮ್ಮ ತಮ್ಮ ಹರಕೆ ತೀರಿಸಿ, ದೇವರ ಸೇವೆ ಮಾಡಿ, ಪ್ರಸಾದ ಭೋಜನ ಪಡೆದು ಹಿಂದಿರುಗುವ ಪರಂಪರೆ ಲಾಗಾಯ್ತಿನಿಂದಲೂ ಜಾರಿಯಲ್ಲಿದೆ.

ಅಷ್ಟಕ್ಕೂ ಧಾರ್ಮಿಕ ಕ್ಷೇತ್ರದಲ್ಲಿ ಇಂಥ ಆಹಾರ, ಮದ್ಯವನ್ನು ಸೇವಿಸಲೇಬೇಕೆಂಬ ಹಟವೂ ಅಲ್ಲಿಗೆ ಬರುವ ಆಸ್ತಿಕ ಭಕ್ತರಿಗೆ ಇರುವುದಿಲ್ಲ! ಮದ್ಯ ಸೇವಿಸಿ ದೇವರಿಗೆ ಪೂಜೆ, ಪುನಸ್ಕಾರ ಸಲ್ಲಿಸುವ ಸಂಸ್ಕೃತಿ ನಮ್ಮಲ್ಲಿಲ್ಲ. ಭಕ್ತರಿಗೆ ಇಲ್ಲದ ಮನಃಸ್ಥಿತಿಯನ್ನು ಅನಗತ್ಯವಾಗಿ ತುಂಬಿ ಗೊಂದಲ ಸೃಷ್ಟಿಸುವುದು ಯಾಕೆಂಬುದು ತಿಳಿಯದು.

-ಗಣಪತಿ ಶಿರಳಗಿ, ಸಾಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT