ಆಂಧ್ರಪ್ರದೇಶಕ್ಕೆ ವಿಶಾಖಪಟ್ಟಣ, ಅಮರಾವತಿ ಮತ್ತು ಕರ್ನೂಲ್ ನಗರಗಳನ್ನು ಕ್ರಮವಾಗಿ ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗದ ರಾಜಧಾನಿಗಳನ್ನಾಗಿ ಮಾಡಲು ನಿರ್ಧರಿಸಲಾಗಿದೆ. ಈ ಕ್ರಮದಿಂದ ರಾಜ್ಯದ ಬೊಕ್ಕಸಕ್ಕೆ ಎಷ್ಟೇ ಖರ್ಚು ಬರಲಿ, ಸುಗಮ ಮತ್ತು ಪರಿಣಾಮಕಾರಿ ಆಡಳಿತದ ದೃಷ್ಟಿಯಿಂದ ಇದು ಮಹತ್ವದ ಕ್ರಮ ಎಂದು ಹೇಳಬಹುದು. ಅಲ್ಲದೆ, ನಿರ್ಲಕ್ಷ್ಯದ ಕೂಗನ್ನು ನಿಯಂತ್ರಿಸಿ, ಪ್ರತ್ಯೇಕ ರಾಜ್ಯಗಳ ಬೇಡಿಕೆಯನ್ನು ಚಿವುಟಬಹುದು. ಇಂತಹುದೇ ಉದ್ದೇಶಕ್ಕೆ ಕರ್ನಾಟಕದಲ್ಲಿ ಕಟ್ಟಿದ ಬೆಳಗಾವಿಯ ಸುವರ್ಣಸೌಧ ಇನ್ನೂ ತನ್ನ ಉದ್ದೇಶ ಸಾಧಿಸದಿರುವುದು ವಿಪರ್ಯಾಸ.

- ರಮಾನಂದ ಶರ್ಮಾ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.