ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತಿಯ ಮೇಲಿನ ದೌರ್ಜನ್ಯ

Last Updated 31 ಜನವರಿ 2021, 19:30 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಹಿಂದಿ, ಇಂಗ್ಲಿಷ್ ಭಾಷೆಗಷ್ಟೇ ಮಣೆ ಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿ
ರುವುದನ್ನು (ಪ್ರ.ವಾ., ಜ. 31) ತಿಳಿದು ಬೇಸರವಾಯಿತು.

ನಮ್ಮ ನಾಡು, ನಮ್ಮ ಸಂಸ್ಕೃತಿ, ನಮ್ಮ ಭಾಷೆ ನಮ್ಮ ಸ್ವತ್ತೇ ಹೊರತು ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ನಮ್ಮ ಭಾಷೆಯ ಮೇಲೆ ಸವಾರಿ ಮಾಡಲಾಗದು. ಹಾಗೆ ಮಾಡಿದರೆ ಅದನ್ನು ಒಂದು ಸಂಸ್ಕೃತಿಯ ಮೇಲೆ ನಡೆಯುವ ದೌರ್ಜನ್ಯ ಎಂದೇ ಪರಿಗಣಿಸಬೇಕಾಗುತ್ತದೆ. ರಾಜ್ಯದ ಆಡಳಿತ ಭಾಷೆ ಜೊತೆ ಇತರೆ ಯಾವುದೇ ಭಾಷೆ ನಂತರದ ಸ್ಥಾನದಲ್ಲಿ ಇರಬೇಕೇ ಹೊರತು, ನಮ್ಮ ಭಾಷೆಯನ್ನೇ ಅಲ್ಲಗಳೆಯುವುದು ಅಕ್ಷಮ್ಯ ಅಪರಾಧ. ಯಾವುದೇ ಕಚೇರಿ ಆಗಿರಲಿ, ಯಾವುದೇ ಆದೇಶವಾಗಲಿ ಸ್ಥಳೀಯ ಭಾಷೆಯೊಂದಿಗೆ ವ್ಯವಹರಿಸಿದರೆ ಮಾತ್ರ ಫಲಪ್ರದವಾಗಿರುತ್ತದೆ. ಕೇಂದ್ರ ಸರ್ಕಾರ ಸಹ ಇದಕ್ಕೆ ಹೊರತಲ್ಲ.

ಕಡೂರು ಫಣಿಶಂಕರ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT