ಅಪಘಾತವೋ ಸ್ವಯಂಕೃತ ಅಪರಾಧವೋ?
ಅತಿವೇಗವಾಗಿ ಹೋಗುತ್ತಿದ್ದ ‘ಔಡಿ’ ಕಾರು ನಿಯಂತ್ರಣ ಕಳೆದುಕೊಂಡು ಫುಟ್‌ಪಾತ್ ಮೇಲೆ ನುಗ್ಗಿ ಬ್ಯಾಂಕೊಂದರ ಗೋಡೆಗೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ 7 ಮಂದಿ ಮೃತಪಟ್ಟಿದ್ದಾರೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಇದು ಅಪಘಾತವೋ ಸ್ವಯಂಕೃತ ಅಪರಾಧವೋ? ಅಷ್ಟೊಂದು ದುಬಾರಿ ಬೆಲೆಬಾಳುವ ಐಷಾರಾಮಿ ಕಾರು ಅಪಘಾತಕ್ಕೆ ಒಳಗಾಗುತ್ತಿದ್ದಂತೆಯೇ ಏರ್‌ಬ್ಯಾಗ್ ತೆರೆದುಕೊಳ್ಳಲಿಲ್ಲವೇಕೆ? ಒಂದುವೇಳೆ ಇದೇ ಕಾರು ಬೇರೆ ವಾಹನಕ್ಕೆ ಅಥವಾ ನಡೆದುಕೊಂಡು ಹೋಗುತ್ತಿದ್ದವರಿಗೆ ಗುದ್ದಿ ಅವರು ಪ್ರಾಣ ಕಳೆದುಕೊಂಡಿದ್ದರೆ ಯಾರು ಹೊಣೆ? 180- 200 ಕಿ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯವುಳ್ಳ ವಾಹನಗಳನ್ನು ಆ ವೇಗದಲ್ಲಿ ರೇಸಿನಲ್ಲಿ ಉಪಯೋಗಿಸಬಹುದೇ ಹೊರತು ಜನನಿಬಿಡ ನಗರಗಳ ರಸ್ತೆಯಲ್ಲಿ ಅಲ್ಲ.
-ಪಿ.ಜೆ.ರಾಘವೇಂದ್ರ, ಮೈಸೂರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.