‘ಭ್ರಷ್ಟಾಚಾರದ ಪರಂಪರೆಯನ್ನು ಪ್ರಾರಂಭಿಸಿದ್ದೇ ಕಾಂಗ್ರೆಸ್’ ಎಂದಿದ್ದಾರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಪ್ರ.ವಾ., ಏ. 16). ಸರಿ, ಹಾಗೆಂದು ಆ ಭ್ರಷ್ಟಾಚಾರವು ಬಿಜೆಪಿ ನೇತೃತ್ವದ ಸರ್ಕಾರದಲ್ಲೂ ಮುಂದುವರಿಯಬಾರದಲ್ಲ! ಅಷ್ಟೇ ಅಲ್ಲದೆ ಈಗ ಬಿಜೆಪಿ ನೇತೃತ್ವದ ಸರ್ಕಾರದಲ್ಲೂ ಕೇಳಿಬರುತ್ತಿರುವ ಭ್ರಷ್ಟಾಚಾರಕ್ಕೂ ಇದು ಸಮರ್ಥನೆ ಆಗಬಾರದಲ್ಲ! ಕಾಂಗ್ರೆಸ್ ಹಾಗೆ ದುರಾಡಳಿತ ನೀಡಿದ್ದರಿಂದಲೇ ಅಲ್ಲವೇ ಮತದಾರರು ಆ ಪಕ್ಷವನ್ನು ತಿರಸ್ಕರಿಸಿ ಬಿಜೆಪಿಗೆ ಅಧಿಕಾರ ನೀಡಿದ್ದು? ಭ್ರಷ್ಟಾಚಾರದ ಆಪಾದನೆ ಕೇಳಿಬಂದಾಗ ಮುಖ್ಯಮಂತ್ರಿ ಅದರ ಮೂಲ ಹುಡುಕುತ್ತಾ ಹೋಗಿ ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳಬಾರದು. ಒಂದು ವೇಳೆ ಹಾಗೆ ಮಾಡಿದರೆ ಆಗ ಕಾಂಗ್ರೆಸ್ಗೂ ಬಿಜೆಪಿಗೂ ವ್ಯತ್ಯಾಸವೆಲ್ಲಿ ಉಳಿಯುತ್ತದೆ?

-ಹುರುಕಡ್ಲಿಶಿವಕುಮಾರ,ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.