ಭಾನುವಾರ, ಆಗಸ್ಟ್ 1, 2021
27 °C

ಭಯಮುಕ್ತ ವಾತಾವರಣ ನಿರ್ಮಿಸಿ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಬಂಗಾರಪೇಟೆ ತಾಲ್ಲೂಕಿನ ತಹಶೀಲ್ದಾರರು ಕೊಲೆಯಾಗಿರುವುದನ್ನು ತಿಳಿದು ದಿಗ್ಭ್ರಮೆಯಾಯಿತು. ಕೊರೊನಾ ಸಂಕಷ್ಟದಿಂದ ಬದುಕು ಅನಿಶ್ಚಿತತೆಗೆ ಒಳಗಾಗಿದೆ. ಜೀವ ಇದ್ದರೆ ಜೀವನ ಎಂಬ ಸ್ಥಿತಿ ಇದೆ. ಇದರ ನಡುವೆ, ತುಂಡು ಭೂಮಿಗಾಗಿ ಒಬ್ಬ ಮನುಷ್ಯನ ಜೀವ ತೆಗೆಯುವುದು ಅಸಹನೀಯವಾಗಿ ಕಾಣುತ್ತದೆ. ಸರ್ಕಾರದ ಕೆಲವು ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸಲು ಕಷ್ಟಸಾಧ್ಯ ಎಂಬ ಪರಿಸ್ಥಿತಿ ಇರುವುದು ಈ ಕೃತ್ಯದಿಂದ ವೇದ್ಯವಾಗುತ್ತದೆ. ಅಧಿಕಾರಿಗಳು ಭಯಮುಕ್ತರಾಗಿ ಕರ್ತವ್ಯ ನಿರ್ವಹಿಸುವಂತಹ ವಾತಾವರಣ ನಿರ್ಮಾಣವಾಗಬೇಕಾಗಿದೆ.

- ಡಾ. ಕೆ.ಎಸ್‌.ಗಂಗಾಧರ, ಶಿವಮೊಗ್ಗ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.