ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಕಾರು ಖರೀದಿ: ಪ್ರಸ್ತಾವ ಮರುಪರಿಶೀಲಿಸಿ

Last Updated 26 ಫೆಬ್ರುವರಿ 2021, 17:33 IST
ಅಕ್ಷರ ಗಾತ್ರ

ರಾಜ್ಯದ ಸಂಸದರು ಮತ್ತು ಸಚಿವರ ಉಪಯೋಗಕ್ಕೆ, ₹ 22 ಲಕ್ಷದ ಮಿತಿಯನ್ನು ₹ 23 ಲಕ್ಷಕ್ಕೆ ಏರಿಸಿ ಹೊಸ ಕಾರುಗಳನ್ನು ಖರೀದಿಸಲು ಸರ್ಕಾರ ಅನುಮತಿ ನೀಡಿದೆ. ಕೊರೊನಾ ಪಿಡುಗಿನಿಂದ ರಾಜ್ಯದ ಆರ್ಥಿಕ ಸ್ಥಿತಿ ಸಂಕಷ್ಟ ದಲ್ಲಿದ್ದು, ಸಾರಿಗೆ ನಿಗಮಗಳ ನೌಕರರಿಗೆ ಸಕಾಲದಲ್ಲಿ ವೇತನ ನೀಡಲೂ ಸರ್ಕಾರ ಹೆಣಗಾಡುತ್ತಿದೆ. ಇನ್ನೊಂದೆಡೆ, ದಿನೇ ದಿನೇ ಏರುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಿಂದಾಗಿ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಿ ಸಾಮಾನ್ಯ ಜನ ಪರಿತಪಿಸುತ್ತಿದ್ದಾರೆ.

ರಾಜ್ಯದ ಕೆಲವೆಡೆ ಪ್ರವಾಹದಿಂದ ತತ್ತರಿಸಿದ್ದ ಪ್ರದೇಶಗಳ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಇನ್ನೂ ಸಾಧ್ಯವಾಗಿಲ್ಲ. ಈ ಕೆಲಸಕ್ಕೆ ಕೇಂದ್ರದಿಂದ ನಿರೀಕ್ಷಿತ ಮಟ್ಟದಲ್ಲಿ ನೆರವು ಸಹ ದೊರೆತಿಲ್ಲ. ಈ ನಡುವೆ ರಾಜ್ಯಕ್ಕೆ ದೊರಕಬೇಕಾದ ಜಿಎಸ್‌ಟಿ ಪರಿಹಾರವೂ ಕೈಸೇರಲಿಲ್ಲ. ರಾಜ್ಯ ಇಂತಹ ಕಠಿಣ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವಾಗ, ಜನಸೇವಕರೆನಿಸಿಕೊಂಡವರು ಹೊಸ ಐಷಾರಾಮಿ ಕಾರುಗಳನ್ನು ಖರೀದಿಸುವ ತುರ್ತು ಅಗತ್ಯ ಕಾಣುವುದಿಲ್ಲ. ಸರ್ಕಾರ ಈ ಪ್ರಸ್ತಾವವನ್ನು ಮರುಪರಿಶೀಲಿಸುವುದು ಒಳಿತು.

ತಿಪ್ಪೂರುಪುಟ್ಟೇಗೌಡ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT