ಶನಿವಾರ, ಜನವರಿ 25, 2020
28 °C

ಪ್ರತಿರೋಧಕ್ಕೆ ತಡೆ: ಸಲ್ಲದ ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧ ದೇಶದಲ್ಲಿ ಪ್ರತಿರೋಧ ತೀವ್ರವಾಗುತ್ತಿದೆ. ಸರ್ಕಾರವು ಸೆಕ್ಷನ್ 144 ಜಾರಿ ಮೂಲಕ ಶಾಂತಿಯುತ ಪ್ರತಿರೋಧಕ್ಕೂ ತಡೆಒಡ್ಡುತ್ತಿರುವುದು ವಿವೇಕಯುತ ಕ್ರಮವಲ್ಲ. ಆಡಳಿತಾರೂಢ ಸರ್ಕಾರದ ನೀತಿಗಳನ್ನು, ಅದು ಜಾರಿಗೊಳಿಸುವ ಕಾಯ್ದೆ ಕಾನೂನುಗಳನ್ನು ಸಮಸ್ತ ನಾಗರಿಕರೂ ಒಪ್ಪಲೇಬೇಕೆಂದು ಒತ್ತಡ ಹೇರುವುದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸರಿಯಲ್ಲ. ಪ್ರತಿರೋಧದ ಕಾರಣಗಳನ್ನು ಗ್ರಹಿಸಿ ಸೂಕ್ತ ಮಾತುಕತೆಯ ಮೂಲಕ ಜನರಲ್ಲಿನ ಆಕ್ರೋಶವನ್ನು ತಣ್ಣಗಾಗಿಸಲು ಯತ್ನಿಸಬಹುದು.

ಕೇಂದ್ರ ಸರ್ಕಾರವು ಈ ಕಾಯ್ದೆಯ ಜಾರಿಯನ್ನು ಕೆಲ ಕಾಲ ತಡೆಹಿಡಿಯಬೇಕು. ಸರ್ವಪಕ್ಷಗಳ ಸಭೆ ಕರೆದು ಚರ್ಚಿಸಬೇಕು. ಗಣ್ಯರು, ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಬೇಕು. ಬಿಜೆಪಿಯಲ್ಲಿ ಮೌನಕ್ಕೆ ಶರಣಾಗಿರುವ ಹಿರಿಯರು ಈಗಲಾದರೂ ಮಾತನಾಡಬೇಕಿದೆ. ವಿವಿಧ ರಾಜಕೀಯ ಪಕ್ಷಗಳ ನಾಯಕರು ಸಹ ತಮ್ಮ ಕಾರ್ಯಕರ್ತರೊಡನೆ ಮಾತುಕತೆಗೆ ಮುಂದಾಗಬೇಕಿದೆ. 

ದಿವಾಕರ್‌ ಎನ್‌., ಮೈಸೂರು

ಪ್ರತಿಕ್ರಿಯಿಸಿ (+)