ಸೋಮವಾರ, ಏಪ್ರಿಲ್ 19, 2021
29 °C

ವಿದ್ಯಾಸಂಸ್ಥೆಗಳ ಪಾವಿತ್ರ್ಯ ಕಾಪಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿವಿಧ ಹಂತದ ಚುನಾವಣೆಗಳು ನಡೆಯುವಾಗ, ಈ ಕಾರ್ಯದಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮಗಳು ಇದ್ದೇ ಇರುತ್ತವೆ. ಇದಕ್ಕಾಗಿ ಶಾಲಾ ಕಾಲೇಜುಗಳ ಕೊಠಡಿಗಳನ್ನು ಬಳಸಿಕೊಳ್ಳುವ ಆಡಳಿತ ವ್ಯವಸ್ಥೆಯು ಅದನ್ನು ಸರಿಯಾಗಿ ನಿರ್ವಹಿಸಬೇಕಾದ ಅಗತ್ಯ ಇರುತ್ತದೆ. ಆದರೆ ಹಲವೆಡೆ ತರಗತಿಯ ಕೊಠಡಿಗಳಿಗೆ ಬಣ್ಣದ ಗಮ್‍ಟೇಪು ಅಂಟಿಸುವುದು, ಪೆಯಿಂಟ್ ಅಥವಾ ಬಣ್ಣದಿಂದ ಬೇಕಾಬಿಟ್ಟಿ ಗೆರೆಗಳನ್ನು ಎಳೆಯುವುದು, ಕಪ್ಪುಹಲಗೆ, ಗ್ರೀನ್‍ಬೋರ್ಡ್‍ಗಳಿಗೆ ಅಂಟುಹಾಕಿದ ಹಾಳೆಗಳನ್ನು ತೇಪೆ ಹಾಕುವುದು ಕಂಡುಬರುತ್ತದೆ.

ಇಷ್ಟುಮಾತ್ರವಲ್ಲ, ತರಬೇತಿಗೆ ಬರುವ ಕೆಲವು ಸಿಬ್ಬಂದಿ ತಮ್ಮ ಪಾದರಕ್ಷೆಗಳ ಸಮೇತ ಬಿಳಿಗೋಡೆಗೆ ಕಾಲುಕೊಟ್ಟು ವಾಲಿಕೊಂಡು ನಿಂತುಕೊಳ್ಳುವುದೂ ಇರುತ್ತದೆ. ಇದರಿಂದ ಗೋಡೆ ಮೇಲೆಲ್ಲ ಕೊಳಕು ಚಿತ್ರಗಳು ಮೂಡುತ್ತವೆ. ಇಂತಹ ಸಂದರ್ಭದಲ್ಲಿ ವಿದ್ಯಾಸಂಸ್ಥೆಗಳ ಪಾವಿತ್ರ್ಯ ಕಾಯ್ದುಕೊಳ್ಳುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.

-ಸಂಪತ್ ಬೆಟ್ಟಗೆರೆ, ಮೂಡಿಗೆರೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು