ರಾಜ್ಯ ಸರ್ಕಾರ ಇದೇ 6ರಿಂದ 6, 7 ಮತ್ತು 8ನೇ ತರಗತಿಗಳನ್ನು ಪ್ರಾರಂಭಿಸಲು ನಿರ್ಧರಿಸಿರುವುದು ಸ್ವಾಗತಾರ್ಹ. ಸುಮಾರು ಒಂದೂವರೆ ವರ್ಷ ಕಾಲ ಈ ಮಕ್ಕಳು ಶಿಕ್ಷಣದಿಂದ ದೂರವಿದ್ದರು. ಲೆಕ್ಕಕ್ಕಷ್ಟೇ ಎಂಬಂತಿದ್ದ ಆನ್‌ಲೈನ್ ತರಗತಿಗಳಿಗೆ ಎಲ್ಲ ವಿದ್ಯಾರ್ಥಿಗಳನ್ನೂ ತಲುಪಲು ಸಾಧ್ಯವಾಗಿಲ್ಲ. ದುಬಾರಿ ಮೊಬೈಲ್ ಹಾಗೂ ನೆಟ್‌ವರ್ಕ್ ಸಮಸ್ಯೆ ದೊಡ್ಡ ಸವಾಲಾಗಿತ್ತು. ಈ ನಡುವೆ ಪ್ರಾರಂಭಿಸಿದ ವಿದ್ಯಾಗಮ, ವಠಾರ ಶಾಲೆಗಳು ಹೆಸರಿಗೆ ಮಾತ್ರ ಎಂಬಂತಿದ್ದವು.

ಅಗತ್ಯವಾದ ಸುರಕ್ಷಾ ಕ್ರಮಗಳನ್ನು ಕೈಗೊಂಡು ಶಾಲೆಯನ್ನು ಪ್ರಾರಂಭಿಸುವುದೊಂದೇ ಸಾಧ್ಯವಿರುವ ಮಾರ್ಗ. ಕಲಿಕೆಯಿಂದ ದೂರವಿದ್ದ ವಿದ್ಯಾರ್ಥಿಗಳನ್ನು ಮತ್ತೆ ಆ ವಾತಾವರಣಕ್ಕೆ ಒಗ್ಗಿಸಲು ಕನಿಷ್ಠ ತಿಂಗಳಾದರೂ ಅಗತ್ಯವಿದೆ. ಸರ್ಕಾರ ಪ್ರಸ್ತುತ ತೆಗೆದುಕೊಂಡಿರುವ ನಿರ್ಧಾರದ ಜೊತೆಗೆ ಸಾಧ್ಯವಾದಷ್ಟು ಬೇಗ ಒಂದರಿಂದ ಐದನೇ ತರಗತಿಗಳನ್ನೂ ಪ್ರಾರಂಭಿಸಲು ಮುಂದಾಗಲಿ ಹಾಗೂ ಬಿಸಿಯೂಟದ ವ್ಯವಸ್ಥೆಯೂ ಪ್ರಾರಂಭವಾಗಲಿ.

–ಈ.ಬಸವರಾಜು, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.