ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣವಂತರಿಗೆ ಶೋಭೆಯಲ್ಲ

Last Updated 25 ಜನವರಿ 2021, 19:30 IST
ಅಕ್ಷರ ಗಾತ್ರ

ಶಿವಮೊಗ್ಗ ಜಿಲ್ಲೆಯ ಹುಣಸೋಡು ಗ್ರಾಮದಲ್ಲಿ ಅಕ್ರಮ ಗಣಿಗಾರಿಕೆಯ ಫಲವಾಗಿ ಎಂಟಕ್ಕೂ ಹೆಚ್ಚು ಕಾರ್ಮಿಕರು ಬಲಿಯಾದದ್ದು ಅತ್ಯಂತ ನೋವಿನ ಸಂಗತಿ. ಅಕ್ರಮ ಗಣಿಗಾರಿಕೆಯನ್ನು ಸಕ್ರಮಗೊಳಿಸುವ ಹೇಳಿಕೆಗಾಗಿ ತೀವ್ರ ಟೀಕೆಗೆ ಗುರಿಯಾದ ಮುಖ್ಯಮಂತ್ರಿ, ತಮ್ಮ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗಿದೆ, ಕಾನೂನಿನಲ್ಲಿ ಅವಕಾಶವಿದ್ದರೆ ಮಾತ್ರ ಸಕ್ರಮಗೊಳಿಸಲಾಗುವುದು ಎಂದು ತಿದ್ದುಪಡಿ ಮಾಡಿಕೊಂಡಿದ್ದಾರೆ. ಇವೆರಡರಲ್ಲಿ ವ್ಯತ್ಯಾಸವೇನಿದೆ? ಮುಕ್ಕಣ್ಣನಿಗೆ ಮೂರು ಕಣ್ಣುಂಟು ಎನ್ನುವ ಬದಲು ಮೂರು ಕಣ್ಣುಳ್ಳವನು ಯಾವನೋ ಅವನೇ ಮುಕ್ಕಣ್ಣ ಎಂದಂತೆ ಆಯಿತಲ್ಲವೇ?

ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿರುವ ಅಕ್ರಮ ವೀರರಿಗೆ ದಾರಿ ಮಾಡಿಕೊಟ್ಟು ವಿಕ್ರಮರೆನಿಸದೆ, ಇನ್ನಾದರೂ ಈ ಗಣಿಗಳ ಗುಣಿಗಳನ್ನು ಮುಚ್ಚಿ, ಅಗಣಿತ ಸಂಪತ್ತನ್ನು ದೋಚಲು ಅವಕಾಶ ನೀಡದಿರಿ.

ಆರ್.ಎನ್.ಸತ್ಯನಾರಾಯಣ ರಾವ್,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT