ಶುಕ್ರವಾರ, ಸೆಪ್ಟೆಂಬರ್ 25, 2020
24 °C

ವಾಚಕರ ವಾಣಿ | ಆನೆಗೆ ಅಂಕುಶ: ಸ್ವಭಾವ ಅರಿಯಬೇಕಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಆನೆಗೆ ಅಂಕುಶ’ ಎಂಬ ವರದಿ (ಪ್ರ.ವಾ‌., ಆ. 14) ಓದಿದಾಗ, ಕಾಡಾನೆಗಳಿಗೆ ಅಂಕುಶ ಹಾಕಲು ಸಾಧ್ಯವೇ ಎಂಬ ಪ್ರಶ್ನೆ ಮೂಡಿತು. ಆನೆಗಳನ್ನು ನಿಯಂತ್ರಿಸಲು ಸೌರಬೇಲಿ, ಜೇನುಬೇಲಿ, ಪಟಾಕಿ ಸಿಡಿಸುವುದು, ತಡೆಗೋಡೆ ನಿರ್ಮಾಣ ಇನ್ನೂ ಅನೇಕಾನೇಕ ಉಪಾಯಗಳನ್ನು ಉತ್ತೇಜಿಸಲು ಸರ್ಕಾರ ಮುಂದಾಗಿದೆ. ಈ ಎಲ್ಲಾ ಉಪಾಯಗಳು ಮನುಷ್ಯನ ಪರವಾಗಿವೆಯೇ ವಿನಾ ಆನೆಗಳ ಪರವಾಗಿ ಇಲ್ಲ. ಅಂದರೆ ಈ ಉಪಾಯಗಳೆಲ್ಲಾ ಆನೆಗಳನ್ನು ಹೇಗೆಲ್ಲಾ ವಿಧ ವಿಧವಾಗಿ ಕೆರಳಿಸಬಹುದು ಎಂಬುದಕ್ಕೆ ಸಹಕಾರಿಯಾಗಿವೆ. ಅಲ್ಲದೆ ಈ ನಿರ್ಬಂಧಗಳನ್ನು ಆನೆಗಳು ಹೇಗೆಲ್ಲಾ ದಾಟಿವೆ ಎಂಬುದನ್ನು ಈ ಹಿಂದೆ ಅವುಗಳೇ ತಿಳಿಸಿಕೊಟ್ಟಿವೆ. ಹಾಗಾಗಿ ಮೂಲಭೂತವಾಗಿ ಆನೆಗಳ ಸ್ವಭಾವವನ್ನು ಅರಿತುಕೊಳ್ಳುವ ಗೋಜಿಗೆ ಹೋಗದೇ ಅವುಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ.

-ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು