ಶುಕ್ರವಾರ, ಜನವರಿ 15, 2021
21 °C

ವಾಚಕರ ವಾಣಿ: ಸ್ವಾಮೀಜಿಗಳು ಅಭಿನಂದನಾರ್ಹರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ನಡೆದ ಶಾರದಾ ದೇವಿ ಅವರ 168ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ, ಕೊರೊನಾ ವಾರಿಯರ್ಸ್‌ ಆಗಿ ಸೇವೆ ಸಲ್ಲಿಸಿದ ಮಾತೆಯರನ್ನು ಜೀವಂತ ಶಾರದೆಯರೆಂದು ಪೂಜಿಸಿ ಅವರಿಗೆ ಮೂವರು ಸ್ವಾಮೀಜಿಗಳು ಸಾಷ್ಟಾಂಗ ನಮಸ್ಕಾರ ಮಾಡಿದ್ದಾರೆ (ಪ್ರ.ವಾ., ಜ. 6). ಚಿತ್ರದಲ್ಲಿನ ಈ ದೃಶ್ಯವನ್ನು ನೋಡಿ ಹೃದಯ ತುಂಬಿಬಂತು. ಕೊರೊನಾ ವಿರುದ್ಧ ಹೋರಾಡಿದವರಲ್ಲೇ ಶಾರದಾ ಮಾತೆಯನ್ನು ಕಂಡ ಸ್ವಾಮೀಜಿಗಳು ಅಭಿನಂದನಾರ್ಹರು. ಸೇವೆಯೇ ದೈವ, ಸೇವಕನೇ ದೇವರು ಎಂಬ ಸಿರಿ ಪರಿಕಲ್ಪನೆಯ ಸಾಕಾರಕ್ಕೆ ಇದಕ್ಕಿಂತ ಉತ್ತಮ ನಿದರ್ಶನ ಬೇಕೇ?

–ಬಿಂಡಿಗನವಿಲೆ ಭಗವಾನ್, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು