ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಕ್ಕುಟೋದ್ಯಮ: ವದಂತಿ ಸಲ್ಲದು

Last Updated 12 ಮಾರ್ಚ್ 2020, 19:40 IST
ಅಕ್ಷರ ಗಾತ್ರ

ಕೋಳಿಗಳಿಂದ ಕೊರೊನಾ ವೈರಸ್ ಹರಡುವ ಸಾಧ್ಯತೆ ಕುರಿತು ಯಾವುದೇ ಅಧಿಕೃತ ಸಂಶೋಧನೆ ಆಧಾರಿತ ಮಾಹಿತಿ ಲಭ್ಯವಿಲ್ಲ. ಆದರೂ ಕೋಳಿಮಾಂಸ ಸೇವನೆಯಿಂದ ಕೊರೊನಾ ವೈರಸ್ ಸೋಂಕು ತಗಲುತ್ತದೆ ಎಂಬ ವದಂತಿಯನ್ನು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಇದರಿಂದ ಕುಕ್ಕುಟೋದ್ಯಮಕ್ಕೆ ಹೊಡೆತ ಬಿದ್ದಿದ್ದು ದಾಖಲೆ ಮಟ್ಟದಲ್ಲಿ ಬೆಲೆ ಕುಸಿದಿದೆ.

ಮೊದಲೇ ಕೋಳಿ ಆಹಾರ ಉತ್ಪನ್ನಗಳ ಬೆಲೆ ಹೆಚ್ಚಾಗಿದ್ದು ನಿರ್ವಹಣೆ ಕೂಡ ಕಷ್ಟವಾಗಿದೆ. ಇಂತಹುದರಲ್ಲಿ ಇದು ಹೀಗೇ ಮುಂದುವರಿದರೆ, ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿರುವ ಕೋಳಿ ಸಾಕಣೆದಾರರ ಪಾಡೇನು? ಅದೇ ಕೆಲಸವನ್ನು ನಂಬಿಕೊಂಡಿರುವ ಕೂಲಿ ಕಾರ್ಮಿಕರ ಗತಿಯೇನು? ಕೋಳಿ ಸಾಕಣೆ ಉದ್ದಿಮೆಯ ಮಾರುಕಟ್ಟೆಯನ್ನೇ ಅವಲಂಬಿಸಿರುವ ಮೆಕ್ಕೆಜೋಳದ ಬೆಲೆಯೂ ದಿಢೀರನೆ ಕುಸಿದಿದ್ದು, ಅತ್ತ ಕೋಳಿ ಸಾಕಣೆದಾರರು ಮತ್ತು ಇತ್ತ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಯಾವುದೇ ರೋಗ ಬಂದರೂ ಕೋಳಿಗಳಿಂದಲೇ ಹರಡುತ್ತದೆ ಎಂಬಂತೆ ಪ್ರತಿಬಾರಿಯೂ ವದಂತಿ ಹಬ್ಬಿಸಲಾ ಗುತ್ತದೆ. ಇದರ ಹಿಂದೆ ವ್ಯವಸ್ಥಿತ ಪಿತೂರಿಯೇ ಇದೆ ಎನಿಸುತ್ತದೆ. ಇಂತಹ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕುಕ್ಕುಟೋದ್ಯಮದ ಭವಿಷ್ಯದ ಮೇಲೆ ಇದು ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ. ಜನಸಾಮಾನ್ಯರು ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಮೊದಲು ವಿವೇಚನೆ ಬಳಸಬೇಕು. ಇಲ್ಲದಿದ್ದರೆ, ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಶಿಕ್ಷೆ ಅನುಭವಿಸಬೇಕಾಗುತ್ತದೆ.

-ಮುರುಗೇಶ ಡಿ.,ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT