ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಭ್ರಷ್ಟಾಚಾರದ ಕೂಪಕ್ಕೆ ಕಡಿವಾಣ ಬೀಳಲಿ

Last Updated 13 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ರಾಜ್ಯ ಸರ್ಕಾರದ ವಿಮಾ ಇಲಾಖೆಯನ್ನು ಸರ್ಕಾರಿ ನೌಕರರ ಹಿತ ಕಾಪಾಡುವ, ಅಗತ್ಯಗಳನ್ನು ಪೂರೈಸುವ ಸಂಸ್ಥೆಯಾಗಿ ಕಟ್ಟಿ ಬೆಳೆಸಿದವರು ವಿಶ್ವೇಶ್ವರಯ್ಯನವರು. ಆದರೆ ಇಂದು ಅದು ಸರ್ಕಾರದ ಅತ್ಯಂತ ಭ್ರಷ್ಟ ಇಲಾಖೆಗಳಲ್ಲಿ ಒಂದಾಗಿದೆ ಎಂಬ ಆರೋಪ ಹೊತ್ತಿದೆ. ನೌಕರರು ತಾವೇ ಜಮೆ ಮಾಡಿದ ಹಣವನ್ನು ವಾಪಸ್ ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಎಲ್ಲ ಕೆಲಸಕ್ಕೂ ಹೆಚ್ಚಿನ ಸಿಬ್ಬಂದಿ ನಿರ್ಲಜ್ಜೆಯಿಂದ ಲಂಚಕ್ಕೆ ಕೈಯೊಡ್ಡುತ್ತಾರೆ. ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ನನಗೆ ಖುದ್ದಾಗಿ ಇಂತಹ ಅನುಭವವಾಯಿತು.

ಇಲಾಖೆಯು ಭ್ರಷ್ಟಾಚಾರದ ಕೂಪವಾಗಲು ಒಂದು ಪ್ರಮುಖ ಕಾರಣವು ಗಣಕೀಕರಣಗೊಳ್ಳದಿರುವುದು. ಯಾವುದೇ ಮಾಹಿತಿ ಪಡೆಯಬೇಕೆಂದರೆ ಹಲವಾರು ಬಾರಿ ಕಚೇರಿಗೆ ಅಲೆದಾಡಬೇಕಾಗುತ್ತದೆ. ದೂರದ ಊರುಗಳಿಂದ ಜಿಲ್ಲಾ ಕೇಂದ್ರಕ್ಕೆ ಬರುವ ನೌಕರರು, ಹಲವು ಬಾರಿ ತಿರುಗಿ ಹೈರಾಣಾಗುವುದಕ್ಕಿಂತ ಲಂಚ ನೀಡುವುದೇ ಒಳ್ಳೆಯದು ಎಂಬ ನಿರ್ಧಾರಕ್ಕೆ ಬರುತ್ತಾರೆ. ಇಂತಹ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಬೇಕೆಂದರೆ ಇಲಾಖೆಯನ್ನು ಗಣಕೀಕರಣಗೊಳಿಸುವುದು ಅತ್ಯವಶ್ಯಕ.

-ಎಸ್.ಆರ್.ಬಿರಾದಾರ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT