ಭಾನುವಾರ, ಜನವರಿ 26, 2020
18 °C

ಆಧುನಿಕ ಸೌಲಭ್ಯ ಇರುವೆಡೆ ಕ್ರಿಕೆಟ್‌ ಪಂದ್ಯ ಆಯೋಜಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುವಾಹಟಿಯಲ್ಲಿ ಟ್ವೆಂಟಿ–20 ಕ್ರಿಕೆಟ್ ಪಂದ್ಯಕ್ಕೆ ಮಳೆಯಿಂದ ಅಡ್ಡಿ ಉಂಟಾದ್ದರಿಂದ ಪಿಚ್ ಒಣಗಿಸಲು ಹೇರ್ ಡ್ರೈಯರ್ ಬಳಕೆ ಮಾಡಿದ್ದು ವರದಿಯಾಗಿದೆ (ಪ್ರ.ವಾ., ಜ. 6). ಈ ಕಾಲದಲ್ಲಿ ಪಿಚ್ ಒಣಗಿಸಲು ಆಧುನಿಕ ಯಂತ್ರಗಳಿದ್ದರೂ ಗುವಾಹಟಿಯಲ್ಲಿ ಹೇರ್ ಡ್ರೈಯರ್‌ ಬಳಸಿದ್ದು ಹಾಸ್ಯಾಸ್ಪದವೇ ಸರಿ.

ಕ್ರಿಕೆಟ್ ವಲಯಕ್ಕೆ ಖಂಡಿತ ಹಣದ ಕೊರತೆ ಇರಲಾರದು. ಭಾರತ ಕ್ರಿಕೆಟ್ ಮಂಡಳಿಯು ಇನ್ನು ಮುಂದಾದರೂ ಎಲ್ಲ ಮೂಲ ಸೌಕರ್ಯ, ಆಧುನಿಕ ಉಪಕರಣಗಳು ಲಭ್ಯವಿರುವೆಡೆ ಪಂದ್ಯ ಆಯೋಜಿಸಲಿ. ಇದರಿಂದ, ಕ್ರಿಕೆಟ್‌ಪ್ರೇಮಿಗಳಿಗೆ ಕಿರಿಕಿರಿ ಆಗುವುದು ತಪ್ಪುತ್ತದೆ.

ನಗರ ಗುರುದೇವ್ ಭಂಡಾರ್ಕರ್, ಹೊಸನಗರ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು