ಸೋಮವಾರ, ಫೆಬ್ರವರಿ 24, 2020
19 °C

ಸಾಹಿತ್ಯ ಸಮ್ಮೇಳನ ನಿರ್ಣಯಗಳು ವೇದಿಕೆಗಷ್ಟೇ ಸೀಮಿತ

ವಾಚಕರವಾಣಿ Updated:

ಅಕ್ಷರ ಗಾತ್ರ : | |

ಕನ್ನಡ ಭಾಷೆಯನ್ನು ಉಳಿಸಿ– ಬೆಳೆಸುವ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ಕುರಿತು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಕೈಗೊಂಡ ನೂರಾರು ನಿರ್ಣಯಗಳಿಗೆ ಬೆಲೆ ಇಲ್ಲದಂತೆ ಆಗಿರುವುದು ಖಂಡನೀಯ. ಈ ನಿರ್ಣಯಗಳು ಆಯಾ ಸಮ್ಮೇಳನದ ವೇದಿಕೆಗಷ್ಟೇ ಸೀಮಿತವಾದಂತಿವೆ. ಈವರೆಗೂ ನಡೆದಿರುವ ಸಾಹಿತ್ಯ ಸಮ್ಮೇಳನಗಳಲ್ಲಿ ಕೈಗೊಂಡ ನೂರಾರು ನಿರ್ಣಯಗಳ ಅನುಷ್ಠಾನಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಒತ್ತಡ ಹಾಕಿ, ಅವುಗಳು ಕ್ರಿಯೆಗೆ ಇಳಿಯುವಂತೆ ಮಾಡಿದ್ದಿದ್ದರೆ, ರಾಜ್ಯದಲ್ಲಿರುವ ಸಾವಿರಾರು ಕನ್ನಡ ಶಾಲೆಗಳು ಮುಚ್ಚುವ, ಕನ್ನಡ ನಾಡಿನ ಶಾಲೆಗಳಲ್ಲಿ ಕನ್ನಡದಲ್ಲಿ ಮಾತನಾಡಿದರೆ ದಂಡ ವಿಧಿಸುವ, ಬ್ಯಾಂಕಿಂಗ್ ಹಾಗೂ ಇತರ ಉದ್ಯೋಗ ಕ್ಷೇತ್ರಗಳಲ್ಲಿ ಕನ್ನಡಿಗರನ್ನು ನಿರ್ಲಕ್ಷಿಸುವಂತಹ ವಿಪರ್ಯಾಸ ಸಂಭವಿಸುತ್ತಿರಲಿಲ್ಲ.

‌ಕಲಬುರ್ಗಿಯಲ್ಲಿ ಸಮಾರೋಪಗೊಂಡ 85ನೇ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳಾದರೂ ರಾಜ್ಯದಲ್ಲಿ ಅಳಿದುಳಿದಿರುವ ಕನ್ನಡ ಶಾಲೆಗಳಿಗೆ ಬಲ ತುಂಬುವಂತೆ ಆಗಬೇಕಿದೆ. 

ಮಾರುತೇಶ್ ಪುಲಮಘಟ್ಟ, ತುಮಕೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)