ಸೋಮವಾರ, ಜನವರಿ 27, 2020
15 °C

ಪ್ರವಾಸಿಗರ ಸಂಖ್ಯೆ ಹೆಚ್ಚಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಲುಕ್ಯರ ಸ್ಮಾರಕಗಳಾದ ಇತಿಹಾಸ ಪ್ರಸಿದ್ಧ ಬಾದಾಮಿ, ಪಟ್ಟದಕಲ್ಲು ಮತ್ತು ಐಹೊಳೆ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿರುವುದನ್ನು ತಿಳಿದು ಬೇಸರವಾಯಿತು.

ಕಳೆದ ಆಗಸ್ಟ್‌, ಸೆಪ್ಟೆಂಬರ್‌ ತಿಂಗಳುಗಳಲ್ಲಿ ಮಲಪ್ರಭಾ ನದಿಯಲ್ಲಿ ನೆರೆ ಉಂಟಾಗಿ, ಈ ಪ್ರವಾಸಿ ಸ್ಮಾರಕಗಳಿಗೆ ನೀರು ನುಗ್ಗಿದ್ದರಿಂದ ಇಲ್ಲಿನ ರಸ್ತೆಗಳು ಹಾಳಾಗಿವೆ. ಆದರೆ ಅವುಗಳನ್ನು ಇನ್ನೂ ದುರಸ್ತಿ ಮಾಡದಿರುವುದು ದುರದೃಷ್ಟಕರ.

ಕುಡಿಯುವ ನೀರಿನ ಸಮರ್ಪಕ ಪೂರೈಕೆ ಹಾಗೂ ಶೌಚಾಲಯ ವ್ಯವಸ್ಥೆಯನ್ನು ಸರಿಪಡಿಸುವ ಮೂಲಕ ಮತ್ತೆ ಪ್ರವಾಸಿಗರನ್ನು ಸೆಳೆಯಲು ಸರ್ಕಾರ ಮುಂದಾಗಬೇಕು.

ಬಸಪ್ಪ ಎಸ್. ಮುಳ್ಳೂರು, ಹಲಗತ್ತಿ, ರಾಮದುರ್ಗ

ಪ್ರತಿಕ್ರಿಯಿಸಿ (+)